ಶುಕ್ರವಾರ, ಜುಲೈ 30, 2021
26 °C

ಅಂತರ ಪದವಿಪೂರ್ವ ಕಾಲೇಜು ವಾಲಿಬಾಲ್‌ ಟೂರ್ನಿ: ಸುರಾನ ಕಾಲೇಜಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಅಪೂರ್ವ ಆಟ ಆಡಿದ ಸುರಾನ ಇಂಡಿಪೆಂಡೆಂಟ್‌ ಕಾಲೇಜು ಬಾಲಕರ ತಂಡದವರು ಅಂತರ ಪದವಿಪೂರ್ವ ಕಾಲೇಜು ವಾಲಿಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಸೌತ್‌ ಎಂಡ್‌ ವೃತ್ತದಲ್ಲಿರುವ ಸುರಾನ ಕಾಲೇಜು ತಂಡ ಫೈನಲ್‌ನಲ್ಲಿ 21–25, 25–23, 25–17ರಲ್ಲಿ ಅಗ್ರಗಾಮಿ ಕಾಲೇಜು ತಂಡವನ್ನು ಸೋಲಿಸಿತು.

ಮೊದಲ ಸೆಟ್‌ನಲ್ಲಿ ನಿರಾಸೆ ಕಂಡ ಸುರಾನ ತಂಡದವರು ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಅಮೋಘ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ 15–25, 25–22, 15–12ರಲ್ಲಿ ಸಿಂಧಿ ಕಾಲೇಜಿನ ಎದುರು ಗೆದ್ದಿದ್ದ ಸುರಾನ ತಂಡ ಸೆಮಿಫೈನಲ್‌ನಲ್ಲಿ 23–25, 25–21, 15–13ರಲ್ಲಿ ಆದಿತ್ಯ ಕಾಲೇಜು ತಂಡವನ್ನು ಪರಾಭವಗೊಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು