ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಹರಿ, ಲಿಖಿತ್‌ಗೆ ದಾಖಲೆ ಚಿನ್ನ

ರಾಜ್ಯ ಈಜು ಚಾಂಪಿಯನ್‌ಷಿಪ್; ಸಲೋನಿ, ರಿಧಿಮಾ ಮಿಂಚು
Last Updated 31 ಜುಲೈ 2019, 18:40 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಹರಿ ನಟರಾಜ್ ಮತ್ತು ಎಸ್‌.ಪಿ. ಲಿಖಿತ್ ಅವರು ಬಸವನಗುಡಿ ಈಜುಕೊಳದಲ್ಲಿ ನಡೆಯುತ್ತಿರುವ ರಾಜ್ಯ ಈಜು ಸ್ಪ‍ರ್ಧೆಯ ಎರಡನೇ ದಿನವೂ ಚಿನ್ನದ ಮಿಂಚು ಹರಿಸಿದರು. ಇದಲ್ಲದೇ ಒಂದು ರಾಷ್ಟ್ರೀಯ ದಾಖಲೆ ಸೇರಿದಂತೆ ಒಟ್ಟು ಆರು ದಾಖಲೆಗಳು ನಿರ್ಮಾಣಗೊಂಡವು.

ಪುರುಷರ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಂಗಳೂರು ಈಜು ಸಂಶೋಧನಾ ಕೇಂದ್ರದ (ಬಿಎಸ್‌ಆರ್‌ಸಿ) ಶ್ರೀಹರಿ ನಟರಾಜ್‌ 56.23 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು. ಈ ಹಿಂದೆ ಇದ್ದ ತಮ್ಮದೇ ದಾಖಲೆಯನ್ನು (57.53 ಸೆಕೆಂಡ್‌) ಅವರು ಉತ್ತಮಪಡಿಸಿಕೊಂಡರು. ಪುರುಷರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 28.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮತ್ತು 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 2:24:55 ನಿಮಿಷಗಳಲ್ಲಿ ಗುರಿ ಮುಟ್ಟಿ ಕೂಟ ದಾಖಲೆ ನಿರ್ಮಿಸಿದರು.

ಮಹಿಳೆಯರ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ವಿ. ಕುಮಾರ್‌ ಅವರಿಂದ ಕೂಟ ದಾಖಲೆ ನಿರ್ಮಾಣವಾಯಿತು. 1ನಿಮಿಷ ,07.10 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ಮಹಿಳೆಯರ 50 ಮೀ. ಹಾಗೂ 200 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಸಲೋನಿ ದಲಾಲ್‌ ದಾಖಲೆ ಮಾಡಿದರು. 50 ಮೀ. ವಿಭಾಗದಲ್ಲಿ 35.24 ಸೆಕೆಂಡ್‌ಗಳಲ್ಲಿ ಹಾಗೂ 200 ಮೀ. ವಿಭಾಗದಲ್ಲಿ 2:46:71 ನಿಮಿಷಗಳಲ್ಲಿ ಅವರು ಗುರಿ ತಲುಪಿದರು.

ಫಲಿತಾಂಶ
ಪುರುಷರ ವಿಭಾಗ
1500 ಮೀ ಫ್ರೀಸ್ಟೈಲ್‌:
ಅನೀಶ್ ಎಸ್ ಗೌಡ (ಪೂಜಾ ಅಕ್ವೆಟಿಕ್ ಸೆಂಟರ್)–1 ಕಾಲ:16ನಿಮಿಷ, 46.12 ಸೆಕೆಂಡು, ಧ್ಯಾನ್ ಬಾಲಕೃಷ್ಣ (ಗಾಫ್ರೆ ಸ್ವಿಮ್ಮಿಂಗ್ ಪ್ರೋಗಾಂ) –2, ಕೌಸ್ತುಭ್ ಅಗರವಾಲ್ (ಬಸವನಗುಡಿ ಈಜು ಕೇಂದ್ರ)–3.

200 ಮೀ ಬ್ರೆಸ್ಟ್‌ಸ್ಟ್ರೋಕ್‌: ಎಸ್‌.ಪಿ. ಲಿಖಿತ್ (ನೆಟ್ಟಕಲ್ಲಪ್ಪ ಈಜು ಕೇಂದ್ರ; ನೂತನ ದಾಖಲೆ; 2ನಿ,24.55ಸೆ. ಹಳೆಯದು:2ನಿ,26.41ಸೆ; ಪಿ. ಚಂದ್ರು –2018 ) –1, ಲಿತೀಶ್ ಜಿ ಗೌಡ (ಬಸವನಗುಡಿ ಈಜುಕೇಂದ್ರ)–2 ಡಿ.ಎಸ್. ಪೃಥ್ವಿಕ್ (ಬಸವನಗುತಿ ಈಜು ಕೇಂದ್ರ)–3.

100 ಮೀ ಬಟರ್‌ಫ್ಲೈ: ರಕ್ಷಿತ್ ಯು ಶೆಟ್ಟಿ (ಬಿಎಸ್‌ಆರ್‌ಸಿ; ಕಾಲ: 57ಸೆ)–1, ತನಿಶ್ ಜಾರ್ಜ್ ಮ್ಯಾಥ್ಯೂ (ಬಿಎಸ್‌ಆರ್‌ಸಿ)–2, ಎಂ. ಪೃಥ್ವಿ (ಬಸವನಗುಡಿ)–3.

50 ಮೀ ಫ್ರೀಸ್ಟೈಲ್‌: ಎಸ್‌.ಪಿ. ಲಿಖಿತ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್; 24.26ಸೆ)–1, ಎಂ. ಪೃಥ್ವಿ (ಬಸವನಗುಡಿ)–2, ತನೀಶ್ ಜಾರ್ಜ್ ಮ್ಯಾಥ್ಯೂ (ಬಿಎಸ್‌ಆರ್‌ಸಿ)–3.

200 ಮೀ ಮೆಡ್ಲೆ: ಎಸ್. ಶಿವಾ (ಬಸವನಗುಡಿ; 2ನಿ,09.46ಸೆ)–1, ಶ್ರೀಹರಿ ನಟರಾಜ್ (ಬಿಎಸ್‌ಆರ್‌ಸಿ)–2, ವಲ್ಲಭಕೃಷ್ಣ (ಪೂಜಾ ಅಕ್ವೆಟಿಕ್)–3.

50 ಮೀ ಬ್ರೆಸ್ಟ್‌ಸ್ಟೋಕ್: ಎಸ್‌.ಪಿ. ಲಿಖಿತ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್; ನೂತನ ದಾಖಲೆ: 28.69ಸೆ; ಹಳೆಯದು: 29.35ಸೆ)–1, ಡಿ.ಎಸ್. ಪೃಥ್ವಿಕ್ (ಬಸವನಗುಡಿ)–2, ಮಾನವ ದಿಲೀಪ್ (ಬಿಎಸ್‌ಆರ್‌ಸಿ)–3.

100 ಮೀ ಬ್ರೆಸ್ಟ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಬಿಎಸ್‌ಆರ್‌ಸಿ; ನೂತನ ದಾಖಲೆ: 56.23ಸೆ; ಹಳೆಯದು: 57.75ಸೆ)–1, ರಕ್ಷಿತ್ ಯು ಶೆಟ್ಟಿ (ಬಿಎಸ್‌ಆರ್‌ಸಿ)–2, ಎಸ್. ಶಿವಾ (ಬಸವನಗುಡಿ)–3.

100 ಮೀ ಫ್ರೀಸ್ಟೈಲ್‌: ಶ್ರೀಹರಿ ನಟರಾಜ್ (ಬಿಎಸ್‌ಆರ್‌ಸಿ; 51.96ಸೆ)–1, ಎಂ. ಪೃಥ್ವಿ (ಬಸವನಗುಡಿ)–2, ತನೀಶ್ ಜಾರ್ಜ್‌ ಮ್ಯಥ್ಯೂ (ಬಿಎಸ್‌ಆರ್‌ಸಿ)–3.

ಮಹಿಳೆಯರ ವಿಭಾಗ
50 ಮೀ ಬ್ರೆಸ್ಟ್‌ಸ್ಟ್ರೋಕ್:
ಸಲೋನಿ ದಲಾಲ್ (ಬಸವನಗುಡಿ; ನೂತನ ದಾಖಲೆ: 35.24ಸೆ; ಹಳೆಯದು: 35.77ಸೆ)–1, ಅರುಷಿ ಮಂಜುನಾಥ್ (ಡಾಲ್ಫಿನ್ ಅಕ್ವೆಟಿಕ್ಸ್)–2, ದೀಕ್ಷಾ ರಮೇಶ್ (ಬಿಎಸ್‌ಆರ್‌ಸಿ)–3.

100 ಮೀ ಫ್ರೀಸ್ಟೈಲ್: ಖುಷಿ ದಿನೇಶ್ (ಬಸವನಗುಡಿ; 1ನಿ,01.36ಸೆ)–1, ವಿ. ಮಾಳವಿಕಾ (ಬಸವನಗುಡಿ)–2, ಸ್ಮೃತಿ ಮಹಾಲಿಂಗಂ (ಬಿಎಸ್‌ಆರ್‌ಸಿ)–3.

1500 ಮೀ ಫ್ರೀಸ್ಟೈಲ್‌: ಖುಷಿ ದಿನೇಶ್ (ಬಸವನಗುಡಿ ಈಜು ಕೇಂದ್ರ)–1; ಕಾಲ: 18ನಿ, 38.17ಸೆ, ದಿವ್ಯಾ ಘೋಷ್ (ಬಿಎಸ್‌ಆರ್‌ಸಿ)–2, ಅಶ್ಮಿತಾ ಚಂದ್ರ (ಗಾಫ್ರೆ)–3.

200 ಮೀ ಬ್ರೆಸ್ಟ್‌ಸ್ಟ್ರೋಕ್: ಸಲೋನಿ ದಲಾಲ್ (ಬಸವನಗುಡಿ ಈಜುಕೇಂದ್ರ; ನೂತನ ದಾಖಲೆ: 2ನಿ,46.71ಸೆ; ಹಳೆಯದು: 2ನಿ,47.02ಸೆ)-1, ಸಾನ್ವಿ ಎಸ್ ರಾವ್ (ಬಿಎಸ್‌ಆರ್‌ಸಿ)–2, ಅರುಷಿ ಮಂಜುನಾಥ್ (ಡಾಲ್ಫಿನ್ ಅಕ್ವೆಟಿಕ್ಸ್‌)–3.

100 ಮೀ ಬಟರ್‌ಫ್ಲೈ: ದಾಮಿನಿ ಕೆ ಗೌಡ (ಬಸವನಗುಡಿ, ಕಾಲ:1ನಿ, 07.38ಸೆ)–1, ನೀನಾ ವೆಂಕಟೇಶ್ (ಡಾಲ್ಫಿನ್ ಅಕ್ವೆಟಿಕ್ಸ್‌)–2, ಅನ್ವೇಶಾ ಗಿರೀಶ (ವಿಜಯನಗರ ಅಕ್ವೆಟಿಕ್ ಸೆಂಟರ್)–3

50 ಮೀ ಫ್ರೀಸ್ಟೈಲ್: ದೀಕ್ಷಾ ರಮೇಶ್ (ಬಿಎಸ್‌ಆರ್‌ಸಿ; ಕಾಲ: 27.38ಸೆ)–1, ಸ್ಮೃತಿ ಮಹಾಲಿಂಗಂ (ಬಿಎಸ್‌ಆರ್‌ಸಿ)–2, ರಿಧಿಮಾ ವಿ ಕುಮಾರ್ (ಬಸವನಗುಡಿ)–3.

200 ಮೀ ಮೆಡ್ಲೆ: ವಿ. ಮಾಳವಿಕಾ (ಬಸವನಗುಡಿ; ಕಾಲ: 2ನಿ,33.25ಸೆ)–1, ಅವನಿ ತಂತ್ರಿ (ಪೂಜಾ ಅಕ್ವೆಟಿಕ್)–2, ಲಿತೀಶಾ ಮಂದಣ್ಣ (ಗಾಫ್ರೆ)–3.

100 ಮೀ ಬ್ಯಾಕ್‌ಸ್ಟ್ರೋಕ್: ರಿಧಿಮಾ ವಿ ಕುಮಾರ್ (ಬಸವನಗುಡಿ; ನೂತನ: 1ನಿ,07.10ಸೆ; ಹಳೆಯದು: 1ನಿ,07.45ಸೆ)–1, ಸುವನ ಸಿ ಭಾಸ್ಕರ್ (ಡಾಲ್ಫಿನ್)–2, ನೀನಾ ವೆಂಕಟೇಶ್ (ಡಾಲ್ಫಿನ್)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT