ಟೇಬಲ್ ಟೆನಿಸ್ ಟೂರ್ನಿ: ಸಿದ್ಧಾಂತ್, ಸಾನ್ವಿಗೆ ಪ್ರಶಸ್ತಿ

ಬುಧವಾರ, ಜೂಲೈ 17, 2019
23 °C

ಟೇಬಲ್ ಟೆನಿಸ್ ಟೂರ್ನಿ: ಸಿದ್ಧಾಂತ್, ಸಾನ್ವಿಗೆ ಪ್ರಶಸ್ತಿ

Published:
Updated:
Prajavani

ಧಾರವಾಡ: ಬೆಂಗಳೂರಿನ ಚೆಕ್‌ಮೇಟ್‌ ತಂಡ ಪ್ರತಿನಿಧಿಸುವ ಸಿದ್ಧಾಂತ್ ವಾಸನ್ ಮತ್ತು ಬಿಟಿಟಿ ತಂಡ ಪ್ರತಿನಿಧಿಸುವ ಸಾನ್ವಿ ವಿಶಾಲ ಮಾಂಡೇಕರ್‌ ಅವರು ಕಾಸ್ಮಸ್ ಕ್ಲಬ್ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ  ಬಾಲಕರ ಮತ್ತು ಬಾಲಕಿಯರ ಕೆಡೆಟ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಕಾಸ್ಮಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಬಾಲಕರ ಮಿನಿ ಕೆಡೆಟ್ಸ್‌ ಫೈನಲ್‌ನಲ್ಲಿ ಸಿದ್ದಾಂತ್ 11–8, 9–11, 11–7, 1–11 ಹಾಗೂ 11–8ರಲ್ಲಿ ಇದೇ ತಂಡದ ತೇಶುಭ್‌ ದಿನೇಶ್ ವಿರುದ್ಧ ಗೆಲುವು ಸಾಧಿಸಿದ.

ಇದೇ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ತೇಶುಭ್ ದಿನೇಶ್ 11–7, 7–11, 11–7. 6–11. 11–6ರಲ್ಲಿ ಎಸ್‌ಬಿಟಿ ತಂಡದ ಕೆ.ಆಯುಷ್ ಅವರನ್ನು ಪರಾಭವಗೊಳಿಸಿದ. ಮತ್ತೊಂದು ಪಂದ್ಯದಲ್ಲಿ ಸಿದ್ಧಾಂತ ವಾಸನ್ ಅವರು 11–5, 11–7, 11–6ರ ನೇರ ಸೆಟ್‌ನಲ್ಲಿ ಎಂಎಸ್‌ಎಸ್‌ ತಂಡದ ಸೇಶಾಂತ್ ರಾಮಸ್ವಾಮಿ ವಿರುದ್ಧ ಜಯಗಳಿಸಿದ. ಬಾಲಕಿಯರ ವಿಭಾಗದಲ್ಲಿ ಸಾನ್ವಿ ವಿಶಾಲ ಮಾಂಡೇಕರ್‌ 11–9, 11–2, 11–5ರಲ್ಲಿ ಬಿಎನ್‌ಎಂ ತಂಡದ ಋತು ಪಂಡಿತ್ ವಿರುದ್ಧ ನೇರ ಸೆಟ್‌ಗಳ ಗೆಲುವು ಸಾಧಿಸಿದಳು.

ಇದೇ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸಾನ್ವಿ 11–6, 10–12, 8–11, 11–9, 13–11ರಲ್ಲಿ ಎಚ್.ಎ.ಪರ್ಣವಿ ವಿರುದ್ಧ ಗೆಲುವು ಸಾಧಿಸಿದರೆ, ಮತ್ತೊಂದು ಪಂದ್ಯದಲ್ಲಿ ಋತು ಪಂಡಿತ್ 11–4, 6–11, 11–7, 4–11, 117ರಲ್ಲಿ ನೀತಿ ಅಗರವಾಲ್ ವಿರುದ್ಧ ಜಯ ಸಾಧಿಸಿದಳು.

ಮಿನಿ ಕೆಡೆಟ್ಸ್‌ನ ಬಾಲಕರ ಪಂದ್ಯದಲ್ಲಿ ಎಂಪಿ ತಂಡದ ಎನ್.ಅರ್ನವ್‌ 10–12, 5–11, 14–12, 11–8, 11–8ರಲ್ಲಿ ಎಸ್‌ಕೆಐ ತಂಡದ ಅಥರ್ವ ನವರಂಗೆ ವಿರುದ್ಧ ಜಯಗಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡ.

ಇದೇ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅಥರ್ವ 11–8, 11–6, 11–4 ನೇರ ಸೆಟ್‌ನಲ್ಲಿ ಸಿದ್ಧಾಂತ ಧಾರಿವಾಲ ವಿರುದ್ಧ ಜಯಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಎಂಪಿ ತಂಡದ ಅರ್ನವ್ 11–5, 11–5, 11–5ರ ನೇರ ಸೆಟ್‌ನಲ್ಲಿ ವೇದಾಂತ ವಸಿಷ್ಠ ವಿರುದ್ಧ ಜಯಗಳಿಸಿದ. ಮಿನಿ ಕೆಡೆಟ್ಸ್‌ನ ಬಾಲಕಿಯರ ವಿಭಾಗದಲ್ಲಿ ಆಯುಷಿ ಬಾಲಕೃಷ್ಣ ಗೋಡ್ಸೆ 4–11, 14–12, 11–5, 11–9ರಲ್ಲಿ ಎಂಪಿ ತಂಡದ ಸುಮೇಧಾ ಕೆ.ಎಸ್‌.ಭಟ್ ವಿರುದ್ಧ ಜಯಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಳು.

ಸೆಮಿಫೈನಲ್‌ ಪಂದ್ಯಗಳಲ್ಲಿ ಆಯುಷಿ 8–11, 11–9, 12–14, 11–5, 12–10 ರಲ್ಲಿ ಟಾಪ್ ತಂಡದ ಕೈರಾ ಬಾಳಿಗಾ ವಿರುದ್ಧ; ಸುಮೇಧಾ 1–11, 11–9, 11–9, 11–6ರಲ್ಲಿ ಎಂಪಿ ತಂಡದ ಸಮೃತಿ ಸುದರ್ಶನ ವಿರುದ್ಧ ಜಯಸಾಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !