ಶುಕ್ರವಾರ, ಜೂನ್ 25, 2021
20 °C

ಟೇಬಲ್‌ ಟೆನಿಸ್‌: ಭಾರತ ತಂಡಗಳಿಗೆ ನಿರಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಗೊಂಡೊಮರ್‌, ಪೋರ್ಚುಗಲ್‌: ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು, ಒಲಿಂಪಿಕ್‌ ಅರ್ಹತಾ ಟೇಬಲ್‌ ಟೆನಿಸ್‌ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಶುಕ್ರವಾರ ಸೋಲನುಭವಿಸಿದವು. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ತಂಡ ವಿಭಾಗದಲ್ಲಿ ಅರ್ಹತೆ ಪಡೆಯುವ ಆಸೆಯೂ ಕ್ಷೀಣವಾಗಿದೆ.

ಐದನೇ ಶ್ರೇಯಾಂಕದ ಭಾರತ ಪುರುಷರ ತಂಡ ಗೆಲ್ಲಬಹುದೆಂಬ ನಿರೀಕ್ಷೆಯಿತ್ತು. ಆದರೆ 1–3 ಅಂತರದಿಂದ ಸ್ಲೊವೇನಿಯಾಕ್ಕೆ ಮಣಿದರೆ, 17ನೇ ಶ್ರೇಯಾಂಕದ ಮಹಿಳಾ ತಂಡ 2–3 ಅಂತರದಲ್ಲಿ ರುಮೇನಿಯಾಕ್ಕೆ ತಲೆಬಾಗಿತು. ಪುರು ಷರ ತಂಡ ಮೊದಲು ನಡೆದ ಡಬಲ್ಸ್‌ ಪಂದ್ಯದಲ್ಲಿ ಜಯಗಳಿಸಿತು. ಆದರೆ ಸಿಂಗಲ್ಸ್‌ನಲ್ಲಿ ಸತ್ಯನ್‌, ಹರ್ಮೀತ್‌ ದೇಸಾಯಿ, ಶರತ್‌ ಕಮಲ್‌ ಸೋಲನುಭವಿಸಿದ್ದು ಹಿನ್ನಡೆಯಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು