ಟಿಟಿ: ಸೆಮಿಗೆ ಮಣಿಕಾ ಬಾತ್ರಾ

ದೋಹಾ: ಒಲಿಂಪಿಯನ್ ಆಟಗಾರ್ತಿ ಭಾರತದ ಮಣಿಕಾ ಬಾತ್ರಾ ಅವರು ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಟರ್ ಟೇಬಲ್ ಟೆನಿಸ್ ಟೂರ್ನಿಯ ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರ ಮಹಿಳಾ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಮಣಿಕಾ 11-6, 11-9, 4-11, 5-11, 11-7ರಿಂದ ಕೊರಿಯಾದ ಹೊಜೊ ಅವರನ್ನು ಪರಾಭವಗೊಳಿಸಿದರು.
ಮೊದಲ ಎರಡು ಗೇಮ್‌ಗಳನ್ನು ಗೆದ್ದ ಮಣಿಕಾ ಅವರು ಬಳಿಕ ಎರಡು ಗೇಮ್‌ಗಳನ್ನು ಕೈಚೆಲ್ಲಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಒತ್ತಡ ಮೀರಿ ಗೆಲ್ಲುವಲ್ಲಿ ಯಶಸ್ವಿಯಾದರು.
ಮುಂದಿನ ಪಂದ್ಯದಲ್ಲಿ ಮಣಿಕಾ ಬಾತ್ರಾ ಅವರು ಚೀನಾದ ಜಾಂಗ್ ರುಯಿ ಅವರನ್ನು ಎದುರಿಸುವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.