ಮಂಗಳವಾರ, ನವೆಂಬರ್ 19, 2019
29 °C
ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಗೆ ತೆರೆ

ಟೇಬಲ್‌ ಟೆನಿಸ್‌: ಶ್ರೀಜಿತ್‌ ಪ್ರಣವಿಗೆ ಪ್ರಶಸ್ತಿ ಗರಿ

Published:
Updated:
Prajavani

ಮೈಸೂರು: ಬಿ.ಎನ್‌.ಶ್ರೀಜಿತ್‌ ಮತ್ತು ಎಚ್‌.ಎ.ಪ್ರಣವಿ ಅವರು ಭಾನುವಾರ ಇಲ್ಲಿ ಕೊನೆಗೊಂಡ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಕೆಡೆಟ್‌ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಮೈಸೂರು ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆ ಆಶ್ರಯದಲ್ಲಿ ವಿ.ವಿ ಜಿಮ್ನೇಷಿಯಂ ಹಾಲ್‌ನಲ್ಲಿ ನಡೆದ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ಎಸ್‌ಬಿಟಿಟಿ ಅಕಾಡೆಮಿಯ ಶ್ರೀಜಿತ್ 11-13,11-6,13-11,7-11,11-8 ರಲ್ಲಿ ತಮ್ಮದೇ ಆಕಾಡೆಮಿಯ ಕೆ.ಆಯುಷ್‌ ಅವರನ್ನು ಮಣಿಸಿದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಪ್ರಣವಿ 15-13,11-3,8-11,11-8 ರಲ್ಲಿ ನೀತಿ ಅಗರ್‌ವಾಲ್‌ ವಿರುದ್ಧ ಗೆದ್ದರು.

ಅರ್ಣವ್, ಆಯುಷಿಗೆ ಪ್ರಶಸ್ತಿ: ಎನ್‌.ಅರ್ಣವ್ ಮತ್ತು ಆಯುಷಿ ಬಾಲಕೃಷ್ಣ ಗೋಡ್ಸೆ ಅವರು ಕ್ರಮವಾಗಿ ಮಿನಿ ಕೆಡೆಟ್‌ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಫೈನಲ್‌ನಲ್ಲಿ ಅರ್ಣವ್ 11-9,11-9,11-4ರಲ್ಲಿ ಅಥರ್ವ ನವರಂಗೆ ವಿರುದ್ಧ; ಆಯುಷಿ 11-8,3-11,11-5,8-11,11-4 ರಲ್ಲಿ ಸುಮೇದಾ ಕೆ.ಎಸ್‌.ಭಟ್ ವಿರುದ್ಧ ಜಯ ಪಡೆದರು.

ಪ್ರತಿಕ್ರಿಯಿಸಿ (+)