ಶುಕ್ರವಾರ, ಆಗಸ್ಟ್ 6, 2021
23 °C

ಜಾರ್ಜ್ ಫ್ಲಾಯ್ಡ್‌ ಅಂತ್ಯಕ್ರಿಯೆ ಖರ್ಚು ಭರಿಸಲಿರುವ ಮೇವೆದರ್

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಅಮೆರಿಕದಲ್ಲಿ ಹತ್ಯೆಯಾಗಿರುವ ಕಪ್ಪು ಜನಾಂಗದ ಜಾರ್ಜ್‌ ಫ್ಲಾಯ್ಡ್‌ ಅಂತ್ಯಕ್ರಿಯೆ ಮತ್ತು ಸ್ಮರಣೆ ಸೇವೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ವೃತ್ತಿಪರ ಬಾಕ್ಸರ್‌ ಫ್ಲಾಯ್ಡ್‌ ಮೇವೆದರ್ ಘೋಷಿಸಿದ್ದಾರೆ.

ಮೇ 25ರಂದು ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಯು ಫ್ಲಾಯ್ಡ್ ಹತ್ಯೆ ಮಾಡಿದ್ದರಿಂದ ಜನಾಂಗೀಯ ಗಲಭೆಗಳು ಭುಗಿಲೆದ್ದಿವೆ. ಇದರಿಂದಾಗಿ ಕ್ರೀಡಾಕ್ಷೇತ್ರದ ಹಲವು ಗಣ್ಯರು ಫ್ರಾಯ್ಡ್ ಹತ್ಯೆಯನ್ನು ಖಂಡಿಸಿದ್ದಾರೆ.  ಜೂನ್ 9ರಂದು ಹೂಸ್ಟನ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಅಂತಿಮ ಸಂಸ್ಕಾರ ನಡೆಯಲಿದೆ.

‘ಮೇವೆದರ್ ಅವರು ಜಾರ್ಜ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಎಲ್ಲ ರೀತಿಯ ಸಹಾಯ ಒದಗಿಸುವುದಾಗಿ ಹೇಳಿದ್ದಾರೆ’ ಎಂದು ಮೇವೆದರ್ ಸಿಇಒ ಹೇಳಿದ್ದಾರೆ.

ವೃತ್ತಿಪರ ಬಾಕ್ಸಿಂಗ್‌ನಲ್ಲಿ 50 ಪಂದ್ಯಗಳಲ್ಲಿ ಅಜೇಯರಾಗಿರುವ ಮೇವೆದರ್ ಈಚೆಗಷ್ಟೇ ನಿವೃತ್ತಿ ಘೋಷಿಸಿದ್ದರು. ಅವರು ಅತ್ಯಂತ ಶ್ರೀಮಂತ ಬಾಕ್ಸರ್‌ಗಳಲ್ಲಿ ಒಬ್ಬರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು