ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಅಮಿತ್, ಸುಮಿತ್, ಅನಂತ ಫೈನಲ್‌ಗೆ

Last Updated 8 ಏಪ್ರಿಲ್ 2022, 16:27 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಮಿತ್ ಫಂಗಾಲ್ ಮತ್ತು ಸುಮಿತ್ ಅವರು ಫುಕೆಟ್‌ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬಾಕ್ಸಿಂಗ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಮಹಿಳಾ ವಿಭಾಗದಲ್ಲಿ, ಅನಂತ ಪ್ರಹ್ಲಾದ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿರುವ ಅಮಿತ್ ಇಲ್ಲಿ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು ಶುಕ್ರವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ವಿಯೆಟ್ನಾಂನ ಟ್ರಾನ್ ವ್ಯಾನ್ ತವೊ ಎದುರು ಏಕಪಕ್ಷೀಯವಾಗಿ ಗೆದ್ದರು. 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿರುವ ಅವರು ಟೋಕಿಯೊ ಒಲಿಂಪಿಕ್ಸ್ ನಂತರ ಇದೇ ಮೊದಲ ಬಾರಿ ಕಣಕ್ಕೆ ಇಳಿದಿದ್ದಾರೆ.

75 ಕೆಜಿ ವಿಭಾಗದಲ್ಲಿ ಸುಮಿತ್ ಕಜಕಸ್ತಾನದ ಅಯಾತ್‌ ಉಲ್ಲಾ ಟಕಿಜ್‌ ಎದುರು ಜಯ ಗಳಿಸಿದರು. ಮಹಿಳೆಯರ 54 ಕೆಜಿ ವಿಭಾಗದಲ್ಲಿ ಅನಂತ ಪ್ರಹ್ಲಾದ್ ವಿಯೆಟ್ನಾಂನ ಬುಯಿ ಟ್ರಾನ್ ಥಾಯ್‌ ಎದುರು 5–0ಯಿಂದ ಗೆಲುವು ದಾಖಲಿಸಿದರು.

ಮನಿಷಾ (57 ಕೆಜಿ), ಪೂಜಾ (69 ಕೆಜಿ) ಮತ್ತು ಭಾಗ್ಯವತಿ ಕಚಾರಿ (75 ಕೆಜಿ) ಸೆಮಿಫೈನಲ್‌ ಹಣಾಹಣಿಯಲ್ಲಿ ಸೋತು ಕಂಚಿನ ಪದಕ ಗಳಿಸಿದರು. ಆಶಿಶ್ ಕುಮಾರ್ (81 ಕೆಜಿ), ಮೋನಿಕಾ (48 ಕೆಜಿ), ಗೋವಿಂದ ಸಹಾನಿ (48 ಕೆಜಿ) ಮತ್ತು ವರಿಂದರ್ ಸಿಂಗ್ (60 ಕೆಜಿ) ಬುಧವಾರ ಫೈನಲ್‌ಗೆ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT