ಮಂಗಳವಾರ, ಸೆಪ್ಟೆಂಬರ್ 22, 2020
23 °C

ಕಬಡ್ಡಿ: ಟೈಟನ್ಸ್‌ಗೆ ಹ್ಯಾಟ್ರಿಕ್ ಜಯದ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ವಿಶಾಖಪಟ್ಟಣ: ಆತಿಥೇಯ ತೆಲುಗು ಟೈಟನ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಯು.ಪಿ ಯೋಧಾ ವಿರುದ್ಧ ಸೆಣಸಲಿದೆ. ತವರಿನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಟೈಟನ್ಸ್ ವಿರಾಮದ ನಂತರ ಹ್ಯಾಟ್ರಿಕ್ ಜಯದ ಕನಸು ಹೊತ್ತು ಕಣಕ್ಕೆ ಇಳಿಯಲಿದೆ.

ಶನಿವಾರದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಎದುರು 36–26ರಿಂದ ಗೆದ್ದಿದ್ದ ಆತಿಥೇಯರು ಭಾನುವಾರದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ 35–31ರಿಂದ ಜಯಿಸಿತ್ತು. ಈ ಹಿಂದೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಯು.ಪಿ ಯೋಧಾ ಮತ್ತು ತೆಲುಗು ಟೈಟನ್ಸ್‌ 26–26ರಿಂದ ಟೈ ಮಾಡಿಕೊಂಡಿದ್ದವು.

ತೆಲುಗು ಟೈಟನ್ಸ್‌ ತಂಡದ ಪ್ರಮುಖ ಆಟಗಾರ ರಾಹುಲ್ ಚೌಧರಿ ಈ ವರೆಗೆ 16 ಪಂದ್ಯಗಳಲ್ಲಿ 123 ಪಾಯಿಂಟ್ ಗಳಿಸಿದ್ದು ಮಂಗಳವಾರವೂ ಮಿಂಚುವ ಭರವಸೆಯಲ್ಲಿದ್ದಾರೆ. ಚೌಧರಿಗೆ ನೀಲೇಶ್ ಸಾಳುಂಕೆ ಅವರಿಂದ ಉತ್ತಮ ಸಹಕಾರ ಸಿಗುವ ನಿರೀಕ್ಷೆ ಇದೆ.

ಯೋಧಾ ತಂಡ, ನಿತೇಶ್ ಕುಮಾರ್ ಮೇಲೆ ಭರವಸೆ ಇರಿಸಿದೆ. ಅವರು ಟ್ಯಾಕ್ಲಿಂಗ್‌ನಲ್ಲಿ ಒಟ್ಟು 62 ಪಾಯಿಂಟ್‌ ಕಲೆ ಹಾಕಿದ್ದು ಲೀಗ್‌ನಲ್ಲಿ ಅತಿ ಹೆಚ್ಚು ಟ್ಯಾಕ್ಲಿಂಗ್ ಪಾಯಿಂಟ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಕಾಂತ್ ಜಾಧವ್ ಕೂಡ ಯೋಧಾ ತಂಡದಲ್ಲಿ ಭರವಸೆ ಎನಿಸಿದ್ದಾರೆ.

ಇಂದಿನ ಪಂದ್ಯಗಳು
ದಬಂಗ್ ಡೆಲ್ಲಿ– ಯು ಮುಂಬಾ
ಆರಂಭ: ರಾತ್ರಿ 8.00

*
ತೆಲುಗು ಟೈಟನ್ಸ್‌ – ಯು.ಪಿ.ಯೋಧಾ
ಆರಂಭ: ರಾತ್ರಿ 9.00
ಸ್ಥಳ: ರಾಜೀವಗಾಂಧಿ ಕ್ರೀಡಾಂಗಣ, ವಿಶಾಖಪಟ್ಟಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು