ಶುಕ್ರವಾರ, ಸೆಪ್ಟೆಂಬರ್ 17, 2021
22 °C

Tokyo Olympics | 16 ಮಂದಿಗೆ ಕೋವಿಡ್, ಚಂಡಮಾರುತ ಆತಂಕ ದೂರ

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಮತ್ತೆ 16 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಆದರೆ ಇವರ ಪೈಕಿ ಯಾವುದೇ ಕ್ರೀಡಾಪಟುವಿಗೆ ಸೋಂಕು ತಗುಲಲಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಈ ನಡುವೆ ಉತ್ತರ ಜಪಾನ್‌ನಲ್ಲಿ ಉಷ್ಣವಲಯದ ಚಂಡಮಾರುತದಿಂದಾಗಿ ಭಾರಿ ಮಳೆ ಸುರಿದಿದೆ. ಆದರೆ ಒಲಿಂಪಿಕ್ಸ್ ಆತಿಥೇಯ ನಗರ ಟೋಕಿಯೊ ನಗರದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಹಾಗಾಗಿ ಕ್ರೀಡಾಕೂಟಕ್ಕೆ ಎದುರಾಗಿದ್ದ ಆತಂಕ ದೂರವಾಗಿದೆ.

ಇದನ್ನೂ ಓದಿ: 

ಸೋಂಕಿತರ ಒಟ್ಟು ಸಂಖ್ಯೆಯು 169ಕ್ಕೆ ಏರಿದೆ. ಮೊದಲ ಬಾರಿಗೆ ನಾಲ್ಕು ದಿನಗಳಲ್ಲಿ ಕ್ರೀಡಾಪಟುಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಯಾರೂ ಕೂಡಾ ಕ್ರೀಡಾಗ್ರಾಮದಲ್ಲಿ ನೆಲೆಸಿರಲಿಲ್ಲ.

ಅಂದ ಹಾಗೆ ಟೋಕಿಯೊದಲ್ಲಿ ದೈನಂದಿನ 2,848 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ.

ಕೋವಿಡ್-19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಡಚ್ ಟೆನಿಸ್ ಆಟಗಾರ ಜೀನ್ ಜೂಲಿಯನ್ ರೋಜರ್ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.

ಉಷ್ಣವಲಯದ ಚಂಡಮಾರುತದಿಂದಾಗಿ ನೇಪಾರ್ಟಕ್ ಮಿಯಾಗಿ ಪ್ರಾಂತ್ಯದಲ್ಲಿ 1951ರ ಬಳಿಕ ಮೊದಲ ಬಾರಿಗೆ ಭೂಕುಸಿತವಾಗಿದೆ. ಸೆಂಡಾಯ್‌ನಲ್ಲಿ ರೈಲು ಸೇವೆ ವಿಳಂಬವಾಗಿದೆ.

ಚಂಡಮಾರುತದ ಭೀತಿ ಹಿನ್ನೆಲೆಯಲ್ಲಿ ಸರ್ಫಿಂಗ್ ಹಾಗೂ ರೋಯಿಂಗ್ ಸ್ಪರ್ಧೆಗಳ ವೇಳಾಪಟ್ಟಿಯನ್ನು ಮರುನಿಗದಿಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು