ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌: ಚಿನ್ನ ಗೆಲ್ಲುವವರಿಗೆ ಐಒಎದಿಂದ ₹ 75 ಲಕ್ಷ

Last Updated 22 ಜುಲೈ 2021, 16:41 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವವರಿಗೆ ₹ 75 ಲಕ್ಷ ನೀಡಲಾಗುವುದು ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಗುರುವಾರ ತಿಳಿಸಿದೆ. ಬೆಳ್ಳಿ ಪದಕ ಗೆಲ್ಲುವವರಿಗೆ ₹ 40 ಲಕ್ಷ ಮತ್ತು ಕಂಚಿನ ಪದಕ ಗಳಿಸುವವರಿಗೆ ₹ 25 ಲಕ್ಷ, ದೇಶವನ್ನು ಪ್ರತಿನಿಧಿಸುವ ಪ್ರತಿಯೊಬ್ಬರಿಗೆ ತಲಾ ಒಂದು ಲಕ್ಷ ನೀಡುವುದಾಗಿಯೂ ಹೇಳಿದೆ.

ಸಲಹಾ ಸಮಿತಿಯ ಶಿಫಾರಸುಗಳನ್ನು ಐಒಎ ಒಪ್ಪಿಕೊಂಡಿದೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಕ್ರೀಡೆಯನ್ನು ಪ್ರತಿನಿಧಿಸುವ ಫೆಡರೇಷ್‌ನ್‌ಗೆ ತಲಾ ₹ 25 ಲಕ್ಷ ಹೆಚ್ಚುವರಿ ಹಣ ನೀಡಲು ಮತ್ತು ಪದಕ ಗೆಲ್ಲುವ ಕ್ರೀಡೆಯನ್ನು ಪ್ರತಿನಿಧಿಸುವ ಫೆಡರೇಷನ್‌ಗೆ ₹ 30 ಲಕ್ಷ ನೀಡಲು, ಪ್ರತಿಯೊಬ್ಬರಿಗೆ ದಿನವೊಂದಕ್ಕೆ ₹ 50 ಭತ್ಯೆ ನೀಡಲು ಶಿಫಾರಸು ಮಾಡಿದೆ.

‘ಪದಕ ವಿಜೇತರಿಗೆ ಮತ್ತು ಪದಕ ವಿಜೇತರನ್ನು ತಯಾರು ಮಾಡುವ ಫೆಡರೇಷನ್‌ಗಳಿಗೆ ಐಒಎ ಬಹುಮಾನ ನೀಡುತ್ತಿರುವುದು ಇದೇ ಮೊದಲು’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT