ಮಂಗಳವಾರ, ಸೆಪ್ಟೆಂಬರ್ 21, 2021
25 °C

Tokyo Olympics: ಕೋವಿಡ್ ಪರೀಕ್ಷಾ ಕಿಟ್ ಕೊರತೆ ಬಗ್ಗೆ ಜಪಾನ್‌ ಮಾಧ್ಯಮದಿಂದ ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಒಲಿಂಪಿಕ್ಸ್‌ಗೆ ಸಿದ್ಧವಾಗಿರುವ ಕ್ರೀಡಾಗ್ರಾಮದಲ್ಲಿ ಕೋವಿಡ್ ಪರೀಕ್ಷಾ ಕಿಟ್ ಕೊರತೆ ಎದುರಾಗಿದೆ ಎಂದು ಜಪಾನ್‌ನ ಸುದ್ದಿವಾಹಿನಿ ಎನ್‌ಎಚ್‌ಕೆ ವರದಿ ಮಾಡಿದೆ.

ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ದೈನಂದಿನ ಪರೀಕ್ಷೆ ನಡೆಸಲು ಅಗತ್ಯವಿರುವ ಕೋವಿಡ್‌ ಪರೀಕ್ಷಾ ಕಿಟ್‌ಗಳ ಕೊರತೆಯನ್ನು ಸಂಘಟಕರು ಎದುರಿಸುತ್ತಿದ್ದಾರೆ. ಇದರಿಂದಾಗಿ ಕ್ರೀಡಾಗ್ರಾಮದಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳ ಕೋವಿಡ್‌ ಪರೀಕ್ಷೆಯನ್ನು ನಿಗದಿಯಂತೆ ಮಾಡಲಾಗಿಲ್ಲ ಎಂದು ಎನ್‌ಎಚ್‌ಕೆ ಹೇಳಿದೆ.

'ಸೋಮವಾರ ಕ್ರೀಡಾಗ್ರಾಮಕ್ಕೆ ಆಗಮಿಸಿರುವ ಕ್ರೀಡಾಪಟುಗಳ ಕೋವಿಡ್‌ ಪರೀಕ್ಷೆಯನ್ನು ನಿಗದಿಯಂತೆ ಮಾಡಲಾಗಿಲ್ಲ. ಅಂದಿನಿಂದ ಹೆಚ್ಚಿನ ಪರೀಕ್ಷಾ ಕಿಟ್‌ಗಳು ಬಂದಿವೆ ಎಂದು ಸಂಘಟಕರು ತಿಳಿಸಿದ್ದಾರೆ' ಎಂದು ಸುದ್ದಿವಾಹಿನಿ ಹೇಳಿದೆ.

ಇಂದಿನಿಂದ (ಜುಲೈ 23) ಒಲಿಂಪಿಕ್ಸ್‌ ಆರಂಭವಾಗಲಿದೆ. ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ಸೋಂಕಿನ ಇನ್ನೊಂದು ಅಲೆ ಜೋರಾಗಿಯೇ ಏಳುತ್ತಿದ್ದು, ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಇದರಿಂದ ಕ್ರೀಡೆಯ ಮೇಲೆ ಆತಂಕದ ನೆರಳು ಆವರಿಸಿದೆ.

ಇವುಗಳನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು