ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2028ರ ಒಲಿಂಪಿಕ್ಸ್‌ |ಅಗ್ರ 10ರಲ್ಲಿ ಸ್ಥಾನ ಗುರಿ; ಸಚಿವ ಕಿರಣ್‌ ರಿಜಿಜು ವಿಶ್ವಾಸ

Last Updated 29 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: 2028ರ ಒಲಿಂಪಿಕ್ ಕೂಟದ ಪದಕಪಟ್ಟಿಯಲ್ಲಿ ಅಗ್ರ 10ರೊಳಗಿನ ಸ್ಥಾನ ಪಡೆಯುವುದು ನಮ್ಮ ಗುರಿಯಾಗಿದೆ. ಇದು ಅಸಾಧ್ಯವೇನಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದೆ ಎಂದು ಅವರು ನುಡಿದಿದ್ದಾರೆ.

‘2028ರ ಒಲಿಂಪಿಕ್ಸ್‌ಗೆ ಪ್ರತಿಭೆಗಳ ಹುಡುಕಾಟ ಈಗಾಗಲೇ ಆರಂಭವಾಗಿದೆ. ಕೊರೊನಾ ಉಪಟಳದಿಂದ ಜಾರಿಯಲ್ಲಿರುವ ಲಾಕ್‌ಡೌನ್ ತೆರವುಗೊಂಡ ಬಳಿಕ ಈ ಕಾರ್ಯಕ್ಕೆ ಇನ್ನಷ್ಟು ವೇಗ ಸಿಗಲಿದೆ’ ಎಂದು ರಿಜಿಜು ಹೇಳಿದ್ದಾರೆ. ಟೇಬಲ್‌ ಟೆನಿಸ್‌ ಕೋಚ್‌ಗಳಿಗೆ ಹಮ್ಮಿಕೊಂಡಿದ್ದ ಆನ್‌ಲೈನ್‌ ಉಪನ್ಯಾಸವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಪ್ರತಿಭೆಗಳ ಹುಡುಕಾಟಕ್ಕೆ, ಆಯಾ ಕ್ರೀಡೆಗಳಲ್ಲಿ ಪರಿಣತಿ ಹೊಂದಿರುವ ಕೋಚ್‌ಗಳು ಹಾಗೂ ಅಥ್ಲೀಟುಗಳ ವಿಶೇಷ ತಂಡ ರಚಿಸಲಾಗುವುದು. ಈ ತಂಡಗಳು ದೇಶದ ಪ್ರತಿ ಜಿಲ್ಲೆಗೆ ಭೇಟಿ ನೀಡಲಿವೆ. 2028ರ ಒಲಿಂಪಿಕ್ಸ್‌ಗೆ ಇನ್ನೂ ಎಂಟು ವರ್ಷಗಳ ಅವಧಿ ಇರುವುದರಿಂದ ಸೂಕ್ತ ಯೋಜನೆಗಳ ಮೂಲಕ ನಾವು ಪದಕಪಟ್ಟಿಯಲ್ಲಿ ಅಗ್ರ 10ರೊಳಗಿನ ಸ್ಥಾನ ಪಡೆಯಬಹುದು’ ಎಂದು ಅವರು ವಿವರಿಸಿದರು.

ಟೇಬಲ್‌ ಟೆನಿಸ್‌ ಕೋಚ್‌ಗಳಿಗೆ ಹಮ್ಮಿಕೊಂಡಿದ್ದ ಆನ್‌ಲೈನ್‌ ಉಪನ್ಯಾಸದಲ್ಲಿ ಹಿರಿಯ ಆಟಗಾರ ಕಮಲೇಶ್‌ ಮೆಹ್ತಾ, ಭಾರತ ಟೇಬಲ್‌ ಟೆನಿಸ್ ಫೆಡರೇಷನ್‌ನ (ಟಿಟಿಎಫ್‌ಐ) ಕಾರ್ಯದರ್ಶಿ ಎಂ.ಪಿ.ಸಿಂಗ್‌ ಇದ್ದರು. ಭಾರತ ತಂಡದ ಮಾಜಿ ಕೋಚ್‌, ಇಟಲಿಯ ಮ್ಯಾಸಿಮೊ ಕಾನ್‌ಸ್ಟಂಟಿನಿ ಈ ಉಪನ್ಯಾಸ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT