ಬೆಂಗಳೂರು: ನಕುಲ್ ಮತ್ತು ವಿಕ್ರಂ ಅವರ ಪರಿಣಾಮಕಾರಿ ಆಟದ ಬಲದಿಂದ ಎಲ್‌ಐಸಿ ತಂಡ ಇಲ್ಲಿ ನಡೆಯುತ್ತಿರುವ ವಾಜಪೇಯಿ ಕಪ್ ರಾಜ್ಯ ವಾಲಿಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಶಂಕರ ಮಠ ಸಮೀಪದ ವಿವೇಕಾನಂದ ಕ್ರೀಡಾಂಗಣದಲ್ಲಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿರುವ ಟೂರ್ನಿಯ ಮೊದಲ ದಿನವಾದ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ತಂಡ ಎಎಸ್‌ಸಿಯನ್ನು 3–2 ಸೆಟ್‌ಗಳಿಂದ ಮಣಿಸಿತು.

ಮೊದಲ ಎರಡು ಸೆಟ್‌ಗಳಲ್ಲಿ 16–25, 16–25ರಿಂದ ಸೋತರೂ ಚೇತರಿಸಿಕೊಂಡು ಎಲ್‌ಐಸಿ ತಂಡ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಗಳನ್ನು ಕಂಗೆಡಿಸಿತು. 25–22, 26–24 ಹಾಗೂ 15–12ರಿಂದ ಗೆದ್ದು ಸಂಭ್ರಮಿಸಿತು.

ಸುನಿಲ್ ಮತ್ತು ಅಶ್ವಿನ್ ರಾಜ್ ಉತ್ತಮ ಆಟವಾಡಿದರೂ ಎಎಸ್‌ಸಿ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗದೇ ನಿರಾಸೆಗೆ ಒಳಗಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.