ಶನಿವಾರ, ಆಗಸ್ಟ್ 20, 2022
21 °C

ಕೋವಿಡ್‌ ಸೋಂಕಿನಿಂದ ಕುಸ್ತಿಪಟು ವಿನೇಶಾ ಗುಣಮುಖ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಸೋಂಕಿಗೆ ತುತ್ತಾಗಿದ್ದ ಭಾರತದ ಕುಸ್ತಿಪಟು ವಿನೇಶಾ ಪೋಗಟ್‌ ಗುಣಮುಖರಾಗಿದ್ದಾರೆ. ಅವರನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ‘ನೆಗೆಟಿವ್‘ ಬಂದಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಇನ್ನೂ ಪ್ರತ್ಯೇಕವಾಸದಲ್ಲಿದ್ದಾರೆ.

ಈ ಬಾರಿ ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾಗಿರುವ 24 ವರ್ಷದ ವಿನೇಶಾ ಅವರು, ಆಗಸ್ಟ್‌ 29 ರಾಷ್ಟ್ರೀಯ ಕ್ರೀಡಾದಿನದಂದು ನಡೆದ ವರ್ಚುವಲ್‌ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಸಮಾರಂಭದ ಹಿಂದಿನ ದಿನವೇ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟ ಕಾರಣ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

‘ನಾನು ಮಂಗಳವಾರ ಎರಡನೇ ಬಾರಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡೆ. ಫಲಿತಾಂಶ ನೆಗೆಟಿವ್‌ ಬಂದಿದ್ದು ಸಮಾಧಾನ ತಂದಿದೆ‘ ಎಂದು ವಿನೇಶಾ ಟ್ವೀಟ್‌ ಮಾಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಏಕೈಕ ಮಹಿಳಾ ಕುಸ್ತಪಟು ವಿನೇಶಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು