ಶನಿವಾರ, ಸೆಪ್ಟೆಂಬರ್ 18, 2021
30 °C

ಪ್ಯಾರಾ ಕ್ಲೈಂಬಿಂಗ್‌ನಲ್ಲಿ ಸಮರ್ಥನಂ ಕ್ರೀಡಾಪಟುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಷ್ಯಾದ ಮಾಸ್ಕೊದಲ್ಲಿ ಇದೇ 14ರಿಂದ 17ರ ವರೆಗೆ ನಡೆಯಲಿರುವ ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸಮರ್ಥನಂ ಸಂಸ್ಥೆಯ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ದೃಷ್ಟಿದೋಷವುಳ್ಳ ಮುರಳಿ, ಸುಜಾತ ಮತ್ತು ಸುನಿತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದು ಸಮರ್ಥನಂ ಸಂಸ್ಥೆಯ ಕ್ರೀಡಾ ಸಂಯೋಜಕಿ ಶಿಖಾ ಅವರೊಂದಿಗೆ ಈ ಮೂವರು ತೆರಳುವರು. ರೋಪಕ್ ಕ್ಲೈಂಬಿಂಗ್‌ನಲ್ಲಿ ಇವರು ಸ್ಪರ್ಧಿಸಲಿದ್ದು ಬೆಂಗಳೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು ಎಂದು ಪ್ರಕಟಣೆ ತಿಳಿಸಿದೆ.

‘ದೃಷ್ಟಿದೋಷವುಳ್ಳವರು ಇದೇ ಮೊದಲ ಬಾರಿ ಪ್ಯಾರಾ ಕ್ಲೈಂಬಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ’ ಎಂದು ಶಿಖಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು