ರಾಜ್ಯಮಟ್ಟದ 25ನೇ ವಾಲಿಬಾಲ್ ಚಾಂಪಿಯನ್‌ಷಿಪ್: ಧಾರವಾಡಕ್ಕೆ ಗೆಲುವು

ಮೈಸೂರು: ದೀಪಾ ಅವರ ಉತ್ತಮ ಆಟದ ನೆರವಿನಿಂದ ಧಾರವಾಡ ತಂಡದವರು ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಕೇಂದ್ರ ತಂಡದ ವಿರುದ್ಧ ಗೆದ್ದರು.
ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ 25–6, 25–11ರಿಂದ ಎದುರಾಳಿ ತಂಡದವರನ್ನು ಮಣಿಸಿದರು.
45 ನಿಮಿಷಗಳ ಹಣಾಹಣಿಯಲ್ಲಿ ದೀಪಾ ಅವರು ಆಕರ್ಷಕ ಬ್ಲಾಕಿಂಗ್, ಸ್ಪೈಕಿಂಗ್ ಹಾಗೂ ಪಾಸಿಂಗ್ ಮೂಲಕ ಧಾರವಾಡಕ್ಕೆ ಅಂಕ ಹೆಚ್ಚಿಸಿಕೊಟ್ಟರು. ಬೆಂಗಳೂರಿನ ನೇಹಾ ಮ್ಯಾಥ್ಯೂ ಆಟವೂ ಎಲ್ಲರ ಗಮನಸೆಳೆಯಿತು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮೈಸೂರು 25–3, 25–9ರಿಂದ ಕೊಪ್ಪಳದ ಎದುರು, ಶಿವಮೊಗ್ಗ 25–4, 21–25, 15–7ರಿಂದ ವಿಜಯನಗರದ ಎದುರು, ಗದಗ 14–20, 25–16ರಿಂದ ಹಾಸನದ ಎದುರು, ಹಾವೇರಿ 25–17, 25–8ರಿಂದ ರಾಯಚೂರು ಎದುರು ಜಯ ಸಾಧಿಸಿದವು.
ಜಯ ಸಾಧಿಸಿದ ತಂಡಗಳು: ಪುರುಷರ ವಿಭಾಗ: ತುಮಕೂರು, ದಾವಣಗೆರೆ, ಬೆಂಗಳೂರು ಕೇಂದ್ರ, ರಾಮನಗರ, ಕೊಡಗು, ಚಿಕ್ಕೋಡಿ, ಕೋಲಾರ, ಬಳ್ಳಾರಿ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಹಾವೇರಿ, ಕೋಲಾರ, ಶಿವಮೊಗ್ಗ, ಹಾಸನ, ಬೆಂಗಳೂರು ಉತ್ತರ, ಕೊಪ್ಪಳ, ಚಾಮರಾಜನಗರ, ಮೈಸೂರು, ಉತ್ತರ ಕನ್ನಡ, ಚಿಕ್ಕಮಗಳೂರು.
ಮಹಿಳೆಯರ ವಿಭಾಗ: ಗದಗ, ಶಿವಮೊಗ್ಗ, ಹಾಸನ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಹಾವೇರಿ, ಧಾರವಾಡ, ಮೈಸೂರು, ಕೊಪ್ಪಳ, ಬೆಳಗಾವಿ, ಮಂಡ್ಯ, ಚಾಮರಾಜನಗರ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.