ಗುರುವಾರ , ಮಾರ್ಚ್ 23, 2023
23 °C

ವಾಲಿಬಾಲ್‌: ಆತ್ಮವಿಶ್ವಾಸದಲ್ಲಿ ಟಾರ್ಪಿಡೋಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿರುವ ಬೆಂಗ ಳೂರು ಟಾರ್ಪಿಡೋಸ್‌ ತಂಡ, ಪ್ರೈಮ್ ವಾಲಿಬಾಲ್‌ ಲೀಗ್‌ನಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.

ಲೀಗ್‌ನ ಎರಡನೇ ಆವೃತ್ತಿಯ ಟೂರ್ನಿ ಫೆ.4 ರಂದು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿರುವ ಬೆಂಗಳೂರಿನ ತಂಡ ಮೊದಲ ಪಂದ್ಯದಲ್ಲಿ ಕೋಲ್ಕತ್ತ ಥಂಡರ್‌ಬೋಲ್ಟ್ಸ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಟಾರ್ಪಿಡೋಸ್‌ ತಂಡವು ಅಮೆರಿ ಕದ ಡೇವಿಡ್‌ ಲೀ ಅವರನ್ನು ಕೋಚ್‌ ಆಗಿ ನೇಮಿಸಿದೆ. ಲೀ ಕಳೆದ ಆವೃತ್ತಿಯಲ್ಲಿ ಕ್ಯಾಲಿಕಟ್‌ ಹೀರೋಸ್‌ ಪರ ಆಡಿದ್ದರು.

ಮೊದಲ ಬಾರಿ ಕೋಚ್‌ ಆಗಿ ಕಾರ್ಯನಿರ್ವಹಿಸುವುದನ್ನು ಉತ್ಸು ಕತೆಯಿಂದ ಎದುರು ನೋಡುತ್ತಿರು ವುದಾಗಿ ಅವರು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೊದಲ ಆವೃತ್ತಿಯ ಟೂರ್ನಿಯಲ್ಲಿ ಒಬ್ಬ ಆಟಗಾರನಾಗಿ ಪಾಲ್ಗೊಂಡದ್ದು ನನಗೆ ನೆರವಾಗಲಿದೆ. ಲೀಗ್‌ನಲ್ಲಿರುವ ಬಹುತೇಕ ಎಲ್ಲ ಆಟಗಾರರ ಶಕ್ತಿ ಹಾಗೂ ದೌರ್ಬಲ್ಯ ಏನೆಂಬುದನ್ನು ಗಮನಿಸಿದ್ದೇನೆ. ಆಟಗಾರರ ತಪ್ಪುಗಳನ್ನು ತಿದ್ದಿ, ತಂಡದ ಬಲ ಹೆಚ್ಚಿಸುವುದು ನನ್ನ ಗುರಿ’ ಎಂದು ಹೇಳಿದರು.

ಲೀ ಅವರು 3 ಸಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. 2008 ರ ಬೀಜಿಂಗ್‌ ಕೂಟದಲ್ಲಿ ಚಿನ್ನ ಹಾಗೂ 2016 ರಿಯೊ ಕೂಟದಲ್ಲಿ ಕಂಚು ಗೆದ್ದ ಅಮೆರಿಕ ತಂಡದ ಸದಸ್ಯರಾಗಿದ್ದರು.

ಟಾರ್ಪಿಡೋಸ್ ತಂಡ: ಅಲಿರೆಜಾ ಅಬಲೂಚ್, ಸ್ವಿಟೆಲಿನ್‌ ಸ್ವಿಟನೊವ್, ಟಿ.ಆರ್‌.ಸೇತು, ಎಂ.ಸಿ.ಮುಜೀಬ್, ಪಿ.ವಿ.ಜಿಷ್ಣು, ಇಬಿನ್‌ ಜೋಸ್, ಎ.ನಿಸಾಮ್‌ ಮುಹಮ್ಮದ್, ಸುಧೀರ್‌ ಶೆಟ್ಟಿ, ಎಂ.ವೈಶಾಖ್‌ ರೆಂಜಿತ್, ಪಂಕಜ್‌ ಶರ್ಮಾ, ವಿನಾಯಕ ರೋಖಡೆ, ಬಿ.ಮಿಥುನ್‌ ಕುಮಾರ್, ತರುಣ್‌ ಗೌಡ, ಸೃಜನ್ ಶೆಟ್ಟಿ. ಕೋಚ್‌: ಡೇವಿಡ್‌ ಲೀ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು