ಗ್ವಾಂಗ್ಜು, ದಕ್ಷಿಣ ಕೊರಿಯಾ (ಎಎಫ್ಪಿ): ಆತಿಥೇಯ ತಂಡವನ್ನು 64–0ಯಿಂದ ಮಣಿಸಿದ ಹಂಗೆರಿ ತಂಡದವರು ಮಹಿಳೆಯರ ವಾಟರ್ ಪೋಲೊ ವಿಶ್ವ ಚಾಂಪಿಯನ್ಷಿಪ್ನಲ್ಲಿ ದಾಖಲೆ ಬರೆದರು. ಇದೇ ಮೊದಲ ಬಾರಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡ ಹಂಗೆರಿ ಈ ಗಳಿಗೆಯನ್ನು ಸ್ಮರಣೀಯವಾಗಿಸಿಕೊಂಡಿತು.

‘ಬಿ’ ಗುಂಪಿನ ಪಂದ್ಯದಲ್ಲಿ ಗೋಲುಗಳ ಮಳೆಯನ್ನೇ ಸುರಿಸಿದ ಹಂಗೆರಿ ತಂಡದ ಆಟಗಾರ್ತಿಯರು ಮೊದಲಾರ್ಧದಲ್ಲೇ 34 ಗೋಲುಗಳನ್ನು ಗಳಿಸಿದರು. ದ್ವಿತೀಯಾರ್ಧದಲ್ಲೂ ಆಧಿಪತ್ಯ ಸ್ಥಾಪಿಸಿ 30 ಗೋಲುಗಳನ್ನು ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ಷಿಪ್ ನೆದರ್ಲೆಂಡ್ಸ್ ಎದುರು 33–0ಯಿಂದ ಸೋತ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಿಂದ ಹೊರಬಿದ್ದಿತು.

ರೋಮ್ನಲ್ಲಿ 1994ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಷಿಪ್ನಲ್ಲಿ ನ್ಯೂಜಿಲೆಂಡ್ ಪುರುಷರ ತಂಡವನ್ನು 38–1ರಿಂದ ಮಣಿಸಿದ್ದ ಕ್ರೊವೇಷ್ಯಾ ದೊಡ್ಡ ಅಂತರದ ಜಯದ ದಾಖಲೆ ಬರೆದಿತ್ತು. ಈ ದಾಖಲೆ ಈಗ ಹಂಗೆರಿ ಪಾಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.