ಬೆಂಗಳೂರು: ಕರ್ನಾಟಕದ ನಿಷೆಲ್ ಡೆಲ್ಫಿನಾ ಡಿಸೋಜಾ ಮತ್ತು ಉಷಾ ಎಸ್.ಆರ್ ಅವರು ಖೇಲೊ ಇಂಡಿಯಾ ಮಹಿಳೆಯರ ರಾಷ್ಟ್ರೀಯ ರ‍್ಯಾಂಕಿಂಗ್ ವೇಟ್‌ಲಿಫ್ಟಿಂಗ್ ಟೂರ್ನಿ ಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 76 ಕೆಜಿ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ನಿಷೆಲ್ ಒಟ್ಟು 158 ಕೆಜಿ (ಸ್ನ್ಯಾಚ್ 72+ ಕ್ಲೀನ್ ಆ್ಯಂಡ್ ಜರ್ಕ್ 86) ಭಾರ ಎತ್ತಿದರು. ಈ ವಿಭಾಗದಲ್ಲಿ ತೆಲಂಗಾಣದ ವಿ.ಸಾಹಿತಿ (ಒಟ್ಟು 174 ಕೆಜಿ) ಚಿನ್ನ ಜಯಿಸಿದರೆ, ಉತ್ತರ ಪ್ರದೇಶದ ಜ್ಯೋತಿ ಯಾದವ್ (156 ಕೆಜಿ) ಕಂಚು ಗೆದ್ದರು.

87 ಕೆಜಿ ಸೀನಿಯರ್ ವಿಭಾಗದಲ್ಲಿ ಉಷಾ ಅವರಿಗೆ ಕಂಚು ಒಲಿಯಿತು. ಅವರು ಒಟ್ಟು 187 ಕೆಜಿ (ಸ್ನ್ಯಾಚ್ 83+ ಕ್ಲೀನ್ ಆ್ಯಂಡ್ ಜರ್ಕ್ 104) ಭಾರ ಸಾಧನೆ ಮಾಡಿದರು. ಈ ವಿಭಾಗದ ಚಿನ್ನವು ಅಸ್ಸಾಂನ ಮಧುಸ್ಮಿತಾ ಬರುವಾ (ಒಟ್ಟು 196 ಕೆಜಿ) ಅವರ ಪಾಲಾಯಿತು. ರೈಲ್ವೆ ತಂಡದ ಬಿ.ಎನ್.ಉಷಾ (187 ಕೆಜಿ) ಬೆಳ್ಳಿ ಜಯಿಸಿದರು.

87 ಕೆಜಿ ಜೂನಿಯರ್ ವಿಭಾಗದಲ್ಲಿ ಗುಜರಾತ್‌ನ ಆಯುಷಿ ಗಜ್ಜರ್ (171 ಕೆಜಿ), +81 ಕೆಜಿ ಯೂತ್ ವಿಭಾಗದಲ್ಲಿ ಹರಿಯಾಣದ ಮುಸ್ಕಾನ್ (152 ಕೆಜಿ), 81 ಕೆಜಿ ಸೀನಿಯರ್ ವಿಭಾಗದಲ್ಲಿ ಛತ್ತೀಸಗಡದ ವನಿಷ್ಠಾ ವರ್ಮಾ (196 ಕೆಜಿ), ಜೂನಿಯರ್ ವಿಭಾಗದಲ್ಲಿ ಒಡಿಶಾದ ಶ್ವೇತಾಲಿನಾ ನಾಯಕ್ (162 ಕೆಜಿ), ಯೂತ್ ವಿಭಾಗದಲ್ಲಿ ತಮಿಳುನಾಡಿನ ಆರ್.ಪಿ. ಕೀರ್ತನಾ (170 ಕೆಜಿ), 76 ಕೆಜಿ ಸೀನಿಯರ್ ವಿಭಾಗದಲ್ಲಿ ಮಿಜೋರಾಂನ ಲಾಲ್‌ಚಾನಿಮಿ (215 ಕೆಜಿ), ಯೂತ್ ವಿಭಾಗದಲ್ಲಿ ತಮಿಳುನಾಡಿನ ಹಸೀನಾ ಶ್ರಿನ್ (160 ಕೆಜಿ) ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.