ಗುರುವಾರ , ಆಗಸ್ಟ್ 22, 2019
27 °C

ವ್ಹೀಲ್‌ಚೇರ್‌ ಫೆನ್ಸಿಂಗ್‌: ರಾಜ್ಯಕ್ಕೆ 3 ಪದಕ

Published:
Updated:
Prajavani

ಬೆಂಗಳೂರು: ಚೆನ್ನೈನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ವ್ಹೀಲ್‌ಚೇರ್ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡದವರು ಮೂರು ಪದಕ ಗಳಿಸಿದರು.

ಚೆನ್ನೈನ ಜವಾಹರಲಾಲ್‌ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ತಂಡ ಮತ್ತು ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ 20 ರಾಜ್ಯಗಳ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಕರ್ನಾಟಕ ತಂಡ ಸೆಬರ್ ಮತ್ತು ಇಪ್ಪಿ ವಿಭಾಗದಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ರಾಘವೇಂದ್ರ, ತಿಮ್ಮಣ್ಣ, ಪ್ರಶಾಂತ್, ತ್ಯಾಗರಾಜನ್ ಹಾಗೂ ‘ಪ್ರಜಾವಾಣಿ’ ಉಪಸಂಪಾದಕ ಎಂ.ಎಚ್. ಪೃಥ್ವಿರಾಜ್‌ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ತ್ಯಾಗರಾಜನ್ ಚಿನ್ನದ ಪದಕ ಗೆದ್ದುಕೊಂಡರು.

Post Comments (+)