ಶುಕ್ರವಾರ, ಮೇ 27, 2022
28 °C

ಏಷ್ಯಾಕಪ್ ಮಹಿಳಾ ಹಾಕಿ: ಭಾರತಕ್ಕೆ ಭರ್ಜರಿ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಸ್ಕತ್‌: ವಂದನಾ ಕಟಾರಿಯಾ, ನವನೀತ್ ಕೌರ್‌ ಹಾಗೂ ಶರ್ಮಿಳಾ ಗಳಿಸಿದ ತಲಾ ಎರಡು ಗೋಲುಗಳ ನೆರವಿನಿಂದ ಭಾರತ ತಂಡವು ಏಷ್ಯಾಕಪ್ ಮಹಿಳಾ ಹಾಕಿ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿತು.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 9–0ಯಿಂದ ಮಲೇಷ್ಯಾ ತಂಡವನ್ನು ‍ಪರಾಭವಗೊಳಿಸಿತು. ಸವಿತಾ ಪೂನಿಯಾ ನಾಯಕತ್ವದ ಭಾರತ ತಂಡವು ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ನಾಲ್ಕು ಗೋಲು ದಾಖಲಿಸಿದರೆ, ಎರಡನೇ ಕ್ವಾರ್ಟರ್‌ನಲ್ಲಿ ಐದು ಗೋಲುಗಳನ್ನು ಗಳಿಸಿತು.

ವಂದನಾ (ಎಂಟು ಮತ್ತು 34ನೇ ನಿಮಿಷ), ನವನೀತ್ ಕೌರ್‌ (15 ಮತ್ತು 27ನೇ ನಿಮಿಷ), ಶರ್ಮಿಳಾ (46 ಮತ್ತು 59ನೇ ನಿಮಿಷ) ಕೈಚಳಕ ತೋರಿದರು. ಉಪನಾಯಕಿ ದೀಪ್ ಗ್ರೇಸ್ ಎಕ್ಕಾ (10ನೇ ನಿ.), ಲಾಲ್‌ರೆಮ್ಸಿಯಾಮಿ (38ನೇ ನಿ.) ಮತ್ತು ಮೋನಿಕಾ (40ನೇ ನಿ.) ತಲಾ ಒಂದು ಗೋಲು ದಾಖಲಿಸಿ ಗೆಲುವಿಗೆ ಕಾಣಿಕೆ ನೀಡಿದರು.

ಭಾನುವಾರ ಭಾರತ ತಂಡಕ್ಕೆ ಜಪಾನ್ ಸವಾಲು ಎದುರಾಗಲಿದೆ.

ಇನ್ನೊಂದು ಪಂದ್ಯದಲ್ಲಿ ಜಪಾನ್‌ 6–0ಯಿಂದ ಸಿಂಗಪುರ ತಂಡಕ್ಕೆ ಸೋಲುಣಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು