ಗುರುವಾರ , ಮೇ 6, 2021
30 °C

ರಾಷ್ಟ್ರೀಯ ಶಿಬಿರಕ್ಕೆ ಮಹಿಳಾ ಹಾಕಿ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿಯರು ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು  ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರಕ್ಕೆ ಭಾನುವಾರ ಆಗಮಿಸಲಿದ್ದಾರೆ.

ತರಬೇತಿ ಆರಂಭಕ್ಕೂ ಮೊದಲು 25 ಮಂದಿಯ ತಂಡವು ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.

ಈ ವರ್ಷದ ಜನವರಿಯಲ್ಲಿ ಭಾರತದ ಮಹಿಳೆಯರು ಅರ್ಜೆಂಟೀನಾ ಪ್ರವಾಸ ಕೈಗೊಂಡಿದ್ದರು. ಅಲ್ಲಿಯ ಜೂನಿಯರ್, ಬಿ ಹಾಗೂ ಸೀನಿಯರ್ ತಂಡಗಳ ಎದುರು ಒಟ್ಟು ಏಳು ಪಂದ್ಯಗಳನ್ನು ಆಡಿದ್ದರು. ಒಂದು ವರ್ಷದ ಬಳಿಕ ಭಾರತ ತಂಡವು ಕೈಗೊಂಡ ಪ್ರವಾಸವಾಗಿತ್ತು ಅದು.

ಫೆಬ್ರುವರಿಯಲ್ಲಿ ಜರ್ಮನಿಯ ಡಸ್ಸಲ್‌ಡಾರ್ಫ್‌ಗೆ ತೆರಳಿದ್ದ ರಾಣಿ ರಾಂಪಾಲ್ ಸಾರಥ್ಯದ ಭಾರತ, ಆತಿಥೇಯ ತಂಡದ ವಿರುದ್ಧ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿತ್ತು.

ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಸಾಯ್‌, ದೇಶದ ವಿವಿಧ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳಲ್ಲಿ (ಎನ್‌ಎಸ್‌ಇ) ಮೂರು ವಾರಗಳ ಕಾಲ ‘ಬೇಸಿಗೆ ರಜೆ‘ ಘೋಷಿಸಿತ್ತು. ಆದರೆ ಒಲಿಂಪಿಕ್ಸ್ ಅರ್ಹತೆ ಗಳಿಸಿರುವ ಅಥ್ಲೀಟುಗಳು ತಾವು ಈಗಿರುವ ಕೇಂದ್ರಗಳಲ್ಲೇ ತರಬೇತಿ ಮುಂದುವರಿಸಲು ಅನುಮತಿ ನೀಡಿತ್ತು.

ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಸಂಭವನೀಯ ಆಟಗಾರ್ತಿಯರು: ಗೋಲ್‌ಕೀಪರ್‌ಗಳು: ಸವಿತಾ, ರಜನಿ ಎತಿಮರ್ಪು, ಬಿಚುದೇವಿ ಕರಿಬಮ್‌.

ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ, ರೀನಾ ಖೋಕರ್‌, ಸಲೀಮಾ ಟೇಟ್‌, ಮನ್‌ಪ್ರೀತ್ ಕೌರ್‌, ಗುರ್ಜಿತ್ ಕೌರ್‌ ಹಾಗೂ ನಿಶಾ.‌‌

ಮಿಡ್‌ಫೀಲ್ಡರ್ಸ್‌: ನಿಕ್ಕಿ ಪ್ರಧಾನ್‌, ಮೋನಿಕಾ ನೇಹಾ, ಲಿಲಿಮಾ ಮಿನ್ಜ್‌, ಸುಶೀಲಾ ಚಾನು ಪುಖ್ರಂಬಮ್‌ ಮತ್ತು ನಮಿತಾ ಟೊಪ್ಪೊ.

ಫಾರ್ವ‌ಡ್ಸ್: ರಾಣಿ ರಾಂಪಾಲ್‌, ಲಾಲ್‌ರೆಮ್ಸಿಯಾಮಿ, ವಂದನಾ ಕಟಾರಿಯಾ, ನವಜೋತ್ ಕೌರ್‌, ನವನೀತ್ ಕೌರ್, ರಾಜ್ವಿಂದರ್‌ ಕೌರ್‌, ಜ್ಯೋತಿ, ಶರ್ಮಿಳಾ ದೇವಿ, ಉದಿತಾ, ರಶ್ಮಿತಾ ಮಿನ್ಜ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.