ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಒಳಾಂಗಣ ಅಥ್ಲೆಟಿಕ್ಸ್: ಮಾರ್ಟಿನೇಜ್‌ಗೆ ಟ್ರಿಪಲ್ ಜಂಪ್ ಚಿನ್ನ

Last Updated 18 ಮಾರ್ಚ್ 2022, 21:43 IST
ಅಕ್ಷರ ಗಾತ್ರ

ಬೆಲ್‌ಗ್ರೇಡ್: ಕ್ಯೂಬಾದ ಅಥ್ಲೀಟ್ ಲೇಜಾರೊ ಮಾರ್ಟಿನೇಜ್ ಶುಕ್ರವಾರ ಇಲ್ಲಿ ಆರಂಭವಾದ ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ನ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದರು.

ಈ ವಿಭಾಗದ ಸ್ಪರ್ಧೆಯಲ್ಲಿ ಮಾರ್ಟಿನೇಜ್, ಒಲಿಂಪಿಕ್ ಚಾಂಪಿಯನ್ ಪೆಡ್ರೊ ಪಿಚಾರ್ಡೊ ಅವರನ್ನು ಹಿಂದಿಕ್ಕಿದರು.

ಮೊದಲ ಸುತ್ತಿನ ಜಿಗಿತದಲ್ಲಿ ಮಾರ್ಟಿನೇಜ್ 17.64 ಮೀಟರ್ಸ್ ಸಾಧನೆ ಮಾಡಿದರು. ತಮ್ಮ ಹಿಂದಿನ ದಾಖಲೆಗಿಂತ 43 ಸೆಂಟಿಮೀಟರ್ಸ್ ಹೆಚ್ಚು ಜಿಗಿದರು. ಪೋರ್ಚುಗಲ್‌ನ ಪಿಚಾರ್ಡೊ 17.46 ಮೀಟರ್ಸ್‌ ಜಿಗಿಯುವ ಮೂಲಕ ಬೆಳ್ಳಿ ಪದಕ ಪಡೆದರು. ಅಮೆರಿಕದ ಡೊನಾಲ್ಡ್‌ ಸ್ಕಾಟ್ ಕಂಚು ಪಡೆದರು.

ದ್ಯುತಿ ಚಾಂದ್‌ಗೆ ನಿರಾಶೆ: ಭಾರತದ ಅಥ್ಲೀಟ್ ದ್ಯುತಿ ಚಾಂದ್ ಮಹಿಳೆಯರ 60 ಮೀಟರ್ಸ್ ಓಟದಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ನಿರಾಶೆ ಅನುಭವಿಸಿದರು.

ಹೀಟ್ಸ್‌ನಲ್ಲಿ ದ್ಯುತಿ 7.35 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆರನೇ ಸ್ಥಾನ ಪಡೆದರು. ಒಟ್ಟು 46 ಸ್ಪರ್ಧಿಗಳಿದ್ದ ಈ ವಿಭಾಗದಲ್ಲಿ ದ್ಯುತಿ 30ನೇ ರ‍್ಯಾಂಕ್ ಪಡೆದರು.

ಒಟ್ಟು ಆರು ಹೀಟ್ಸ್‌ಗಳು ನಡೆದವು. ಪ್ರತಿ ಹೀಟ್ಸ್‌ನಲ್ಲಿ ಅಗ್ರ ಮೂರು ಸ್ಥಾನ ಪಡೆದವರು ಸೆಮಿಗೆ ಅರ್ಹತೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT