ಮಂಗಳವಾರ, ಅಕ್ಟೋಬರ್ 4, 2022
27 °C
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಕಂಚಿನ ಪದಕದ ಸುತ್ತಿಗೆ ಸಾಗರ್‌

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌ ಪೂನಿಯಾಗೆ ಆಘಾತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಲ್‌ಗ್ರೇಡ್‌, ಸರ್ಬಿಯಾ: ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ, ಭಾರತದ ಬಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಚಿನ್ನದ ಪದಕದ ಸ್ಪರ್ಧೆಯಿಂದ ಅವರು ಹೊರಬಿದ್ದರು. ಸಾಗರ್‌ ಜಗ್ಲಾನ್‌ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ ಬಜರಂಗ್‌, ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 65 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ 0–10ರಿಂದ (ತಾಂತ್ರಿಕ ಶ್ರೇಷ್ಠತೆ) ಅಮೆರಿಕದ ಯಿಯಾನ್ನಿ ಡೈಕೊಮಿಹಾಲಿಸ್‌ ಎದುರು ಪರಾಭವಗೊಂಡರು. ಒಂದು ವೇಳೆ ಯಿಯಾನ್ನಿ ಫೈನಲ್ ತಲುಪಿದರೆ ಭಾರತದ ಕುಸ್ತಿಪಟುವಿಗೆ ರಿಪೇಚ್‌ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಲಿದೆ.

ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಬಜರಂಗ್ 5–4ರಿಂದ ಕ್ಯೂಬಾದ ಅಲೆಜಾಂಡ್ರೊ ಎನ್ರಿಕ್ ವಾಲ್ಡ್ಸ್‌ ವಿರುದ್ಧ ಗೆದ್ದಿದ್ದರು.

18 ವರ್ಷದ ಸಾಗರ್ ಜಗ್ಲಾನ್‌, 74 ಕೆಜಿ ವಿಭಾಗದ ಸ್ಪರ್ಧೆಯಲ್ಲಿ 7–3ರಿಂದ ಮಂಗೋಲಿಯಾದ ಸುಲ್ದ್‌ಖು ಅವರನ್ನು ಮಣಿಸಿ ಕಂಚಿನ ಪದಕದ ಪ್ಲೇ ಆಫ್‌ಗೆ ತಲುಪಿದರು. 

97 ಕೆಜಿ ವಿಭಾಗದಲ್ಲಿ ವಿಕ್ಕಿ ಮತ್ತು 61 ಕೆಜಿ ವಿಭಾಗದಲ್ಲಿ ಪಂಕಜ್‌ ಅವರು ಅರ್ಹತಾ ಬೌಟ್‌ಗಳಲ್ಲೇ ನಿರಾಸೆ ಅನುಭವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು