ಮಂಗಳವಾರ, ಫೆಬ್ರವರಿ 25, 2020
19 °C

ವಿಶ್ವ ಟೂರ್‌ ಫೈನಲ್ಸ್‌: ಎರಡನೇ ಪಂದ್ಯದಲ್ಲೂ ಸೋತ ಸಿಂಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಂಗ್‌ಝೌ: ಹಾಲಿ ಚಾಂಪಿಯನ್‌ ಪಿ.ವಿ.ಸಿಂಧು ಅವರು ಗುರುವಾರ ನಡೆದ ಮೂರು ಗೇಮ್‌ ಗಳ ಪಂದ್ಯದಲ್ಲಿ ಚೀನಾದ ಚೆನ್‌ ಯುಫಿ ಅವರಿಗೆ ಮಣಿದರು. ಆ ಮೂಲಕ ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್‌ ನಿಂದ ಬಹುತೇಕ ನಿರ್ಗಮಿಸಿದಂತಾಗಿದೆ.

ಬುಧವಾರ ಜಪಾನ್‌ನ ಅಕಾನೆ ಯಮಗುಚಿ ಅವರ ಎದುರು ನಡೆದ ಪಂದ್ಯದಂತೆ ಈ ಪಂದ್ಯದಲ್ಲೂ ಸಿಂಧು ಮೊದಲ ಗೇಮ್‌ ಗೆದ್ದುಕೊಂಡಿದ್ದರು. ಆದರೆ ಮುನ್ನಡೆ ಲಾಭ ಪಡೆಯಲಾಗಲಿಲ್ಲ. ಚೆನ್‌ ಒಂದು ಗಂಟೆ 12 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ 20–22, 21–16, 21–12ರಲ್ಲಿ ಜಯಶಾಲಿಯಾದರು. ಎರಡನೇ ಸೋಲಿನಿಂದ ನಾಕೌಟ್‌ಗೆ ಮುನ್ನಡೆಯುವ ಕನಸು ಬಹುತೇಕ ದೂರವಾಯಿತು.

ಮೊದಲ ಗೇಮ್‌ನಲ್ಲಿ 17–20 ರಲ್ಲಿ ಹಿಂದೆಯಿದ್ದ ಸಿಂಧು ಸತತ ಐದು ಗೇಮ್‌ಗಳನ್ನು ಗೆದ್ದುಕೊಂಡು 1–0 ಮುನ್ನಡೆ ಸಾಧಿಸಿದ್ದರು. ಆದರೆ ಚೀನಾ ಆಟಗಾರ್ತಿ ಎರಡನೇ ಗೇಮ್‌ನ ಆರಂಭದಿಂದಲೇ ಮುನ್ನಡೆ ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲೂ ಅವರು ನಿಯಂತ್ರಣ ಹೊಂದಿದ್ದರು. ಈ ವರ್ಷ ವಿವಿಧ ಆರು ಟೂರ್ನಿಗಳಲ್ಲಿ ಫೈನಲ್‌ ತಲುಪಿದ್ದ ಯುಫಿ, ಎಲ್ಲ ಸಂದರ್ಭಗಳ ಲ್ಲಿ ಜಯಶಾಲಿಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು