ಸೋಮವಾರ, ಏಪ್ರಿಲ್ 19, 2021
31 °C

ಕುಸ್ತಿ: ವಿನೇಶಾ ಪೋಗಟ್‌ಗೆ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ತಾನ್‌ಬುಲ್‌: ಭಾರತದ ಅಗ್ರಮಾನ್ಯ ಕುಸ್ತಿಪಟು ವಿನೇಶಾ ಪೋಗಟ್ ಅವರು ಯಾಸರ್‌ ದೋಗು ಅಂತರರಾಷ್ಟ್ರೀಯ ಟೂರ್ನಿಯ ಮಹಿಳೆಯರ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ಭಾನುವಾರ ಫೈನಲ್‌ ಪಂದ್ಯದಲ್ಲಿ ರಷ್ಯಾದ ಎಕಟೆರಿನಾ ಪೊಲೆಶ್ಚುಕ್‌ ವಿರುದ್ಧ ಅವರು ಪಾಯಿಂಟ್‌ಗಳ ಆಧಾರದಲ್ಲಿ ಜಯಗಳಿಸಿದರು. ಸ್ಪೇನ್‌ನಲ್ಲಿ ನಡೆದ ಗ್ರ್ಯಾನ್‌ಪ್ರಿ ಸ್ಪರ್ಧೆಯಲ್ಲೂ ವಿನೇಶ್‌ ಅಗ್ರಸ್ಥಾನ ಪಡೆದಿದ್ದರು.

ಇದು ವಿಶ್ವ ಕುಸ್ತಿ ಒಕ್ಕೂಟ ರ‍್ಯಾಂಕಿಂಗ್‌ ಸಿರೀಸ್‌ ಟೂರ್ನಿಯಾಗಿದೆ. ವಿನೇಶ್‌ ಅಲ್ಲದೆ ಭಾರತದ ಸೀಮಾ (50 ಕೆಜಿ) ಮತ್ತು ಮಂಜು (59 ಕೆಜಿ) ಕೂಡ ತಮ್ಮ ವಿಭಾಗಗಳಲ್ಲಿ ಸ್ವರ್ಣ ಪದಕ ಪಡೆದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು