ಭಾನುವಾರ, ನವೆಂಬರ್ 28, 2021
20 °C

ಯೂತ್ ಕಂಟೆಂಡರ್ ಟಿಟಿ: ಯಶಸ್ವಿನಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಯಶಸ್ವಿನಿ ಘೋರ್ಪಡೆ ಅವರು ಮಸ್ಕತ್‌ನಲ್ಲಿ ನಡೆದ ಡಬ್ಲ್ಯುಟಿಟಿ ಯೂತ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯ 17 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. 

17 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಅವರು ಉಜ್ಬೆಕಿಸ್ತಾನದ ಮಗ್ದೀವ ಅವರನ್ನು 12-10, 11-3, 11-4ರಲ್ಲಿ ಮಣಿಸಿದರು. ಸೆಮಿಫೈನಲ್‌ನಲ್ಲಿ ಅವರು ಭಾರತದ ತನೀಶಾ ವಿರುದ್ಧ 11 -6, 11-7, 11-9ರಲ್ಲಿ ಜಯ ಗಳಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲೂ ಅವರಿಗೆ ಭಾರತದ ಆಟಗಾರ್ತಿ ಎದುರಾಳಿಯಾಗಿದ್ದರು. ಲಕ್ಷಿತಾ ವಿರುದ್ಧ 11-8, 11-4, 11-3ರಲ್ಲಿ ಗೆಲುವು ದಾಖಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು