ಬುಧವಾರ, ಡಿಸೆಂಬರ್ 1, 2021
22 °C
ಸ್ಪೋರ್ಟಲ್ ಟಾಪ್‌ಸ್ಪಿನ್ ಎಐಟಿಎ ಎಸ್‌ಎಸ್‌7 18 ವರ್ಷದೊಳಗಿನವರ ಟೆನಿಸ್ ಟೂರ್ನಿ

ಸಿರಿ ಪಾಟೀಲ್‌ಗೆ ಆಘಾತ ನೀಡಿದ ಯಾಜಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಲ್ಕನೇ ಶ್ರೇಯಾಂಕದ ಸಿರಿ ಪಾಟೀಲ್‌ಗೆ ಆಘಾತ ನೀಡಿದ ತಮಿಳುನಾಡಿನ ಯಾಜಿನಿ ಆರ್‌ ಅವರು ಸ್ಪೋರ್ಟಲ್ ಟಾಪ್‌ಸ್ಪಿನ್ ಎಐಟಿಎ ಎಸ್‌ಎಸ್‌7 ಸರಣಿಯ 18 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

ಬುಧವಾರ ನಡೆದ ಎಂಟರ ಘಟ್ಟದ ಹಣಾಹಣಿಯಲ್ಲಿ ಯಾಜಿಸಿ 6-2, 6-2ರಲ್ಲಿ ಜಯ ಸಾಧಿಸಿದರು. 

ಬಾಲಕ ಮತ್ತು ಬಾಲಕಿಯರ ಇತರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಪ್ರಮುಖರು ನಿರಾಯಾಸವಾಗಿ ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿದರು. ಅಗ್ರ ಶ್ರೇಯಾಂಕದ ಚಾರ್ಮಿ ಗೋಪಿನಾಥ್ ಅವರಿಗೆ ಮಂಗಳವಾರ ಸೋಲುಣಿಸಿದ್ದ ಹೃದಯೇಶಿ ‍ಪಿ ಅವರು ಬುಧವಾರ ಎಂಟನೇ ಶ್ರೇಯಾಂಕದ ನಿಧಿ ಬುವಿಲಾ ಎದುರು 6-3, 6-4ರಲ್ಲಿ ಗೆದ್ದರು.  

ಶ್ರೀನಿಧಿ ಬಾಲಾಜಿ 6-3, 6-3ರಲ್ಲಿ ಪ್ರೇಶಾ ಎಸ್‌ ವಿರುದ್ಧ ಜಯ ಸಾಧಿಸಿದರೆ ಗಗನಾ ಮೋಹನ್ ಕುಮಾರ್‌ 6-1, 6-0ಯಿಂದ ಕಾರ್ತಿಕಾ ಅವರನ್ನು ಮಣಿಸಿದರು.

ಬಾಲಕರ ವಿಭಾಗದಲ್ಲಿ ಒಂದೇ ಶ್ರೇಯಾಂಕದ ಅದಿತ್ ಅಮರನಾಥ್ 6-2, 6-2ರಲ್ಲಿ ವೇದ್‌ ಸುಬೋಧ್‌ ವಿರುದ್ಧ ಜಯ ಗಳಿಸಿದರು. ಮೂರನೇ ಶ್ರೇಯಾಂಕದ ಮನದೀಪ್ ರೆಡ್ಡಿ 6-3, 7-6 (3)ರಲ್ಲಿ ಕಂದವೇಲ್‌ ವಿರುದ್ಧ, ಆರನೇ ಶ್ರೇಯಾಂಕದ ಸುಚಿರ್ ಚೇತನ್ 6-3, 7-6 (5)ರಲ್ಲಿ ಸುಶಾಂಕ್ ವಿರುದ್ಧ, ಎರಡನೇ ಶ್ರೇಯಾಂಕದ ಆಕರ್ಷ್‌ ಜಿ 7-5, 6-4ರಲ್ಲಿ ಪ್ರಿಯಾಂಶ್‌ ಸೋಲ್ಕಾನಿ ಎದುರು ಜಯ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು