ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮನ್ಯು ಮಿಶ್ರಾ ಚೆಸ್‌ ಇತಿಹಾಸ: 12ನೇ ವಯಸ್ಸಿಗೆ ಗ್ರ್ಯಾಂಡ್‌ ಮಾಸ್ಟರ್‌

Last Updated 1 ಜುಲೈ 2021, 7:47 IST
ಅಕ್ಷರ ಗಾತ್ರ

ಹಂಗರಿ: ಗ್ರ್ಯಾಂಡ್‌ ಮಾಸ್ಟರ್‌ ಸೆರ್ಗಿ ಕರ್ಯಾಕಿನ್‌ ಅವರ ದಾಖಲೆಯನ್ನು ಮುರಿದ ಭಾರತ ಮೂಲದ 12 ವರ್ಷದ ಬಾಲಕ ಅಭಿಮನ್ಯು ಮಿಶ್ರಾ ಚೆಸ್‌ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ರಷ್ಯಾದ ಗ್ರ್ಯಾಂಡ್‌ ಮಾಸ್ಟರ್‌ ಸೆರ್ಗಿ ಕರ್ಯಾಕಿನ್‌ ಅವರು ಕಿರಿಯ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟ ಅಲಂಕರಿಸಿದಾಗ 12 ವರ್ಷ 7 ತಿಂಗಳು ವಯಸ್ಸು. ಚೆಸ್‌ನಲ್ಲಿ ನೂತನ ಸಾಧನೆಯ ಮಾಡಿದಾಗ ಅಭಿಮನ್ಯುವಿನ ವಯಸ್ಸು 12 ವರ್ಷ 4 ತಿಂಗಳು ಮತ್ತು 25 ದಿನಗಳು.

ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಚೆಸ್‌ ಪಂದ್ಯದಲ್ಲಿ 2,500 ಎಲೋ ರೇಟಿಂಗ್‌ ಗಳಿಸಿದ ಅಭಿಮನ್ಯು ನೂತನ ಸಾಧನೆ ಮಾಡಿದ್ದಾರೆ ಎಂದು ಚೆಸ್‌.ಕಾಂ ವೆಬ್‌ಸೈಟ್‌ ತಿಳಿಸಿದೆ.

2009, ಫೆಬ್ರವರಿ 5ರಂದು ಅಭಿಮನ್ಯು ಅಮೆರಿಕದ ನ್ಯೂಜೆರ್ಸಿಯಲ್ಲಿ ಜನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT