ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo: ಅಮೆರಿಕದ ಹಿರಿಯ ಹಾಸ್ಯನಟ ಕೋಸ್ಬಿ ಆರೋಪ ಮುಕ್ತ

ಅಕ್ಷರ ಗಾತ್ರ

ಫಿಲಾಡೆಲ್ಫಿಯಾ: 'ಮೀ ಟು' ಆರೋಪಗಳು ಕೇಳಿಬಂದ ನಂತರ ಲೈಂಗಿಕ ಕಿರುಕುಳ ಅಪರಾಧಕ್ಕೆ ಜೈಲು ಸೇರಿದ ಮೊದಲ ಸೆಲೆಬ್ರಿಟಿ, ಅಮೆರಿಕದ ಹಾಸ್ಯನಟ ಬಿಲ್‌ ಕೋಸ್ಬಿ ಅವರನ್ನು ಪೆನ್ಸಿಲ್ವೇನಿಯಾದ ಉಚ್ಚ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

'ಅಮೆರಿಕಾಸ್‌ ಡ್ಯಾಡ್‌' ಎಂದೇ ಗುರುತಿಸಿಕೊಂಡಿದ್ದ 83 ವರ್ಷದ ಬಿಲ್‌ ಕೋಸ್ಬಿ ಬುಧವಾರ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ. 3-10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೋಸ್ಬಿ ಎರಡಕ್ಕಿಂತ ಹೆಚ್ಚು ವರ್ಷ ಫಿಲಾಡೆಲ್ಫಿಯಾ ಸಮೀಪದ ಸ್ಟೇಟ್‌ ಪ್ರಿಸನ್‌ನಲ್ಲಿದ್ದರು.

2018ರಲ್ಲಿ ಮಾಜಿ ಬಾಸ್ಕೆಟ್‌ಬಾಲ್‌ ಆಟಗಾರ್ತಿ ಆ್ಯಂಡ್ರಿಯಾ ಕಾನ್ಸ್‌ಸ್ಟಾಂಡ್‌ ಮೀ ಟು ಆರೋಪ ಮಾಡಿದ್ದರು. ಮಾದಕ ದ್ರವ್ಯ ನೀಡಿ ಲೈಂಗಿಕ ಕಿರುಕುಳ ಎಸಗಿದ್ದರು ಎಂದು ದೂರು ದಾಖಲಿಸಿದ್ದರು. ಇದೇ ಸಂದರ್ಭ 50ಕ್ಕೂ ಹೆಚ್ಚು ಯುವತಿಯರು ಹಾಸ್ಯ ನಟನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಕೇವಲ ಕಾನ್ಸ್‌ಸ್ಚಾಂಡ್‌ ಪ್ರಕರಣದಲ್ಲಿ ಜೈಲು ಸೇರಿದ್ದರು.

1980ರ ಟಿವಿ ಸರಣಿ ದಿ ಕೋಸ್ಬಿ ಶೋ ಮೂಲಕ ಪ್ರಸಿದ್ಧಿ ಪಡೆದಿದ್ದರು. ಅಮೆರಿಕಾಸ್‌ ಡ್ಯಾಡ್‌ ಎಂದೇ ಕರೆಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT