ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

US Open | ಅಲ್ಕರಾಜ್ ಶುಭಾರಂಭ, ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಸತತ 15ನೇ ಜಯ

Published 28 ಆಗಸ್ಟ್ 2024, 7:13 IST
Last Updated 28 ಆಗಸ್ಟ್ 2024, 7:13 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ಯುವ ಪ್ರತಿಭಾವಂತ ಆಟಗಾರ ಕಾರ್ಲೋಸ್‌ ಅಲ್ಕರಾಜ್, ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಅಲ್ಕರಾಜ್ ಅವರು, ಆಸ್ಟ್ರೇಲಿಯಾದ ಲೀ ಟು ವಿರುದ್ಧ 6-2, 4-6, 6-3, 6-1ರ ಅಂತರದಲ್ಲಿ ಗೆಲುವು ಸಾಧಿಸಿದರು.

ಆ ಮೂಲಕ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಅಲ್ಕರಾಜ್, ಸತತ 15ನೇ ಗೆಲುವು ದಾಖಲಿಸಿದರು.

ತಮ್ಮ ವೃತ್ತಿ ಜೀವನದ ಐದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎದುರು ನೋಡುತ್ತಿರುವ, ಅಲ್ಕರಾಜ್ ಅವರಿಗೆ ಎರಡನೇ ಸೆಟ್‌ನಲ್ಲಿ ಹಿನ್ನಡೆ ಎದುರಾಗಿತ್ತು. ಬಳಿಕ ತಮ್ಮ ಎಂದಿನ ಲಯಕ್ಕೆ ಮರಳಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.

ಮೂರನೇ ಶ್ರೇಯಾಂಕಿತ ಅಲ್ಕರಾಜ್, ಪ್ರಸಕ್ತ ಋತುವಿನಲ್ಲಿ ಎರಡು ಗ್ರ್ಯಾನ್‌ಸ್ಲಾಮ್ (ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್) ಗೆದ್ದ ಸಾಧನೆ ಮಾಡಿದ್ದಾರೆ. ಈಗ ಮೂರನೇ ಕಿರೀಟ ಎದುರು ನೋಡುತ್ತಿದ್ದಾರೆ.

ಇತ್ತೀಚಿಗಷ್ಟೇ ಅಂತ್ಯಗೊಂಡ ಪ್ಯಾರಿಸ್ ಒಲಿಂಪಿಕ್ಸ್, ಟೆನಿಸ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ ಪರಾಭವಗೊಂಡಿದ್ದ ಅಲ್ಕರಾಜ್, ಬೆಳ್ಳಿ ಪದಕ ಜಯಿಸಿದ್ದರು.

2022ರಲ್ಲಿ ಅಲ್ಕರಾಜ್, ಮೊದಲ ಬಾರಿಗೆ ಅಮೆರಿಕ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT