ಬುಧವಾರ, ಜನವರಿ 20, 2021
22 °C
ಪೃಥ್ವಿ ಶೇಖರ್–ವಿಘ್ನೇಶ್‌; ಶರ್ಮದ–ಶ್ರವ್ಯ ಜೋಡಿಗೆ ಕ್ರಮವಾಗಿ ಪುರುಷ, ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ

ಟೆನಿಸ್: ಅಗ್ರ ಶ್ರೇಯಾಂಕಿತರ ಸೆಮಿಫೈನಲ್ ಕದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‍ಪುರುಷರ ವಿಭಾಗದ ಅಗ್ರ ಶ್ರೇಯಾಂಕಿತ ನಾಲ್ವರು ಆಟಗಾರರು ಸೆಮಿಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ, ಇಲ್ಲಿನ ರೋಹನ್ ಬೋಪಣ್ಣ ದಿ ಸ್ಪೋರ್ಟ್ಸ್ ಸ್ಕೂಲ್ ಟೆನಿಸ್ ಅಕಾಡೆಮಿ ಆಶ್ರಯದಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಗುರುವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಮೊದಲ ಶ್ರೇಯಾಂಕದ ನಿಕ್ಕಿ ಪೂಣಚ್ಚ 6-2, 6-4ರಲ್ಲಿ ಮಧ್ಯಪ್ರದೇಶದ ಆಟಗಾರ, ಏಳನೇ ಶ್ರೇಯಾಂಕದ ಯಶ್‌ ಯಾದವ್ ಅವರನ್ನು ಮಣಸಿದರು.

ಎರಡನೇ ಶ್ರೇಯಾಂಕದ, ಕರ್ನಾಟಕದ ಆಟಗಾರ ಪ್ರಜ್ವಲ್ ದೇವ್ ತಮಿಳುನಾಡಿನ ಧೀರಜ್ ಶ್ರೀನಿವಾಸನ್ ವಿರುದ್ಧ 6-2, 6-1ರಲ್ಲಿ ಜಯ ಗಳಿಸಿದರು. ಮೂರನೇ ಶ್ರೇಯಾಂಕದ ಸೂರಜ್ ಪ್ರಬೋಧ್ 7-6 (4), 6-7 (3), 6-1ರಲ್ಲಿ ಚಂದ್ರಶೇಖರ್ ಅನಿರುದ್ಧ ವಿರುದ್ಧ ಜಯ ಗಳಿಸಿದರೆ, ನಾಲ್ಕನೇ ಶ್ರೇಯಾಂಕದ ಋಷಿ ರೆಡ್ಡಿ ತಮಿಳುನಾಡಿನ ಪೃಥ್ವಿ ಶೇಖರ್ ವಿರುದ್ಧ 6-2, 6-2ರಲ್ಲಿ ಜಯ ಗಳಿಸಿದರು. 

ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಪ್ರತಿಭಾ ಪ್ರಸಾದ್ ನಾರಾಯಣ್ ತೆಲಂಗಾಣದ ಸಂಜನ ಸಿರಿಮಲ್ಲ ಎದುರು 1-6, 6-1, 1-6ರಲ್ಲಿ ಆಘಾತ ಅನುಭವಿಸಿದರು. ಕರ್ನಾಟಕದ ಮೂರನೇ ಶ್ರೇಯಾಂಕದ ಆಟಗಾರ್ತಿ ಸೋಹಾ ಸಾದಿಕ್ ಅವರು ನಿಧಿ ಚಿಲುಮುಲ ಎದುರು 7-6 (7), 0-6, 6-3ರಲ್ಲಿ ಗೆಲುವು ಸಾಧಿಸಿದರು. ಅಗ್ರ ಶ್ರೇಯಾಂಕಿತೆಯನ್ನು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಸಿದ್ದ ಪೂಜಾ ಇಂಗಳೆ ಕ್ವಾರ್ಟರ್ ಫೈನಲ್‌ನಲ್ಲಿ ರೇಷ್ಮಾ ಮರುರಿಗೆ ಮಣಿದರು. ರೇಷ್ಮಾ, ಕಳೆದ ವಾರ ನಡೆದ 18 ವರ್ಷದೊಳಗಿನವರ ವಿಭಾಗದ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. 

ಫಲಿತಾಂಶಗಳು
ಪುರುಷರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್‌

ಆಂಧ್ರಪ್ರದೇಶದ ನಿಕ್ಕಿ ಪೂಣಚ್ಚಗೆ ಮಧ್ಯಪ್ರದೇಶದ ಯಶ್ ಯಾದವ್‌ ವಿರುದ್ಧ 6-2, 6-4ರಲ್ಲಿ ಜಯ.
ಕರ್ನಾಟಕದ ಋಷಿ ರೆಡ್ಡಿಗೆ ತಮಿಳುನಾಡಿನ ಪೃಥ್ವಿ ಶೇಖರ್ ಎದುರು 6-2, 6-2ರಲ್ಲಿ ಜಯ.
ಕರ್ನಾಟಕದ ಸೂರಜ್ ಪ್ರಬೋಧ್‌ಗೆ ತೆಲಂಗಾಣದ ಚಂದ್ರಶೇಖರ್ ಅನಿರುದ್ಧ ವಿರುದ್ಧ  7-6(4), 6-7(3), 6-1ರಲ್ಲಿ ಜಯ.
ಕರ್ನಾಟಕದ ಪ್ರಜ್ವಲ್ ದೇವ್‌ಗೆ ತಮಿಳುನಾಡಿನ ಧೀರಜ್‌ ಶ್ರೀನಿವಾಸನ್ ಎದುರು 6-2, 6-1ರಲ್ಲಿ ಗೆಲುವು.

ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್‌
ತೆಲಂಗಾಣದ ಸಂಜನ ಸಿರಿಮಲ್ಲಗೆ ಕರ್ನಾಟಕದ ಪ್ರತಿಭಾ ನಾರಾಯಣ್ ಎದುರು 6-1, 1-6, 6-1ರಲ್ಲಿ ಜಯ.
ತಮಿಳುನಾಡಿನ ಸಂಹಿತಾ ಚಮರ್ಥಿಗೆ ತಮಿಳುನಾಡಿನ ವಂಶಿತ ಪಠಾಣಿಯಾ ವಿರುದ್ಧ 6-2, 6-3ರಲ್ಲಿ ಜಯ.
ಕರ್ನಾಟಕದ ರೇಷ್ಮಾ ಮರುರಿಗೆ ಮಹಾರಾಷ್ಟ್ರದ ಪೂಜಾ ಇಂಗಳೆ ವಿರುದ್ಧ 6-4, 6-3ರಲ್ಲಿ ಗೆಲುವು.
ಕರ್ನಾಟಕದ ಸೋಹಾ ಸಾಧಿಕ್‌ಗೆ ತೆಲಂಗಾಣದ ನಿಧಿ ಚಿಲುಮುಲ ವಿರುದ್ಧ  7-6(7), 0-6, 6-3ರಲ್ಲಿ ಜಯ.

ಪುರುಷರ ಡಬಲ್ಸ್ ಫೈನಲ್
ತಮಿಳುನಾಡಿನ ಪೃಥ್ವಿ ಶೇಖರ್–ತೆಲಂಗಾಣದ ವಿಘ್ನೇಶ್‌ ಜೋಡಿಗೆ ತಮಿಳುನಾಡಿನ ಭರತ್ ಕುಮಾರನ್–ಕವಿನ್ ಮಸಿಲಮಣಿ ವಿರುದ್ಧ 6-3, 6-2ರಲ್ಲಿ ಜಯ.

ಮಹಿಳೆಯರ ಡಬಲ್ಸ್ ಫೈನಲ್: ಕರ್ನಾಟಕದ ಶರ್ಮದ–ತೆಲಂಗಾಣದ ಶ್ರವ್ಯ ಶಿವಾನಿ ಜೋಡಿಗೆ ಮಹಾರಾಷ್ಟ್ರದ ಈಶ್ವರಿ ಅನಂತ್‌–ಪೂಜಾ ಇಂಗಳೆ ವಿರುದ್ಧ 6-2, 6-0ಯಲ್ಲಿ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು