ಯುಎಸ್‌ ಓಪನ್‌: ಮೂರನೇ ಸುತ್ತಿಗೆ ಫೆಡರರ್‌, ಜೊಕೊವಿಚ್‌

7

ಯುಎಸ್‌ ಓಪನ್‌: ಮೂರನೇ ಸುತ್ತಿಗೆ ಫೆಡರರ್‌, ಜೊಕೊವಿಚ್‌

Published:
Updated:
Deccan Herald

ನ್ಯೂಯಾರ್ಕ್‌: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮತ್ತು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಫೆಡರರ್ 7–5, 6–4, 6–4ರಲ್ಲಿ ಫ್ರಾನ್ಸ್‌ನ ಬೆನೊಯಿಟ್‌ ಪಿಯೆರ್‌ ಅವರನ್ನು ಸೋಲಿಸಿದರು.

ಎರಡನೇ ಶ್ರೇಯಾಂಕಿತ ಆಟಗಾರ ಫೆಡರರ್‌ ಮೂರು ಸೆಟ್‌ಗಳಲ್ಲೂ ದಿಟ್ಟ ಆಟ ಆಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಜೊಕೊವಿಚ್‌ 6–1, 6–3, 6–7, 6–2ರಲ್ಲಿ ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗ್ರೆನ್‌ ವಿರುದ್ಧ ವಿಜಯಿಯಾದರು.

ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಮರಿನ್‌ ಸಿಲಿಕ್‌ 6–2, 6–0, 6–0ರಲ್ಲಿ ಹುಬರ್ಟ್‌ ಹರ್ಕಾಚ್‌ ಎದುರೂ, ಅಲೆಕ್ಸ್‌ ಡಿ ಮಿನೌರ್‌ 6–4, 6–0, 5–7, 6–2ರಲ್ಲಿ ಫ್ರಾನ್ಸೆಸ್ ಟಿಯಾಫೊ ಮೇಲೂ, ಡೇವಿಡ್‌ ಗೊಫಿನ್‌ 6–2, 6–7, 6–3, 6–2ರಲ್ಲಿ ರಾಬಿನ್‌ ಹಾಸ್‌ ವಿರುದ್ಧವೂ, ಡೀಗೊ ಸ್ವಾರ್ಟ್ಜ್‌ಮನ್‌ 6–2, 6–0, 5–7, 6–2ರಲ್ಲಿ ಜೌಮ್‌ ಮುನಾರ್‌ ಮೇಲೂ, ಅಲೆಕ್ಸಾಂಡರ್‌ ಜ್ವೆರೆವ್‌ 6–4, 6–4, 6–2ರಲ್ಲಿ ನಿಕೊಲಸ್‌ ಮಹುತ್‌ ವಿರುದ್ಧವೂ, ಲುಕಾಸ್‌ ಪೌವಿಲ್ಲೆ 6–7, 6–4, 6–4, 6–3ರಲ್ಲಿ ಮಾರ್ಕಸ್‌ ಬಗ್ದಾತೀಸ್‌ ಮೇಲೂ, ಜಾನ್‌ ಮಿಲ್‌ಮ್ಯಾನ್‌ 6–1, 4–6, 6–4, 6–1ರಲ್ಲಿ ಫ್ಯಾಬಿಯೊ ಫಾಗ್ನಿನಿ ಎದುರೂ ಗೆದ್ದರು.

ಮೂರನೇ ಸುತ್ತಿಗೆ ಮರಿಯಾ: ಮಹಿಳೆಯರ ಸಿಂಗಲ್ಸ್‌ನಲ್ಲಿ ರಷ್ಯಾದ ಮರಿಯಾ ಶರಪೋವಾ ಮೂರನೇ ಸುತ್ತು ಪ್ರವೇಶಿಸಿದರು.

ಎರಡನೇ ಸುತ್ತಿನ ಪೈಪೋಟಿಯಲ್ಲಿ ಮರಿಯಾ 6–2, 7–5ರಲ್ಲಿ ಸೊರಾನಾ ಸಿರ್ಸ್ಟಿ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಮ್ಯಾಡಿಸನ್‌ ಕೀಸ್‌ 6–4, 6–1ರಲ್ಲಿ ಬರ್ನಾರ್ಡಾ ‍ಪೆರಾ ಎದುರೂ, ಅಲೆಕ್ಸಾಂಡ್ರಾ ಕ್ರುನಿಕ್‌ 6–1, 6–3ರಲ್ಲಿ ಕರ್ಸ್ಟನ್‌ ಫ್ಲಿಪ್‌ಕೇನ್ಸ್‌ ಮೇಲೂ, ಜೆಲೆನಾ ಒಸ್ತಾಪೆಂಕೊ 4–6, 6–3, 6–4ರಲ್ಲಿ ಟೇಲರ್‌ ಟೌನ್‌ಸೆಂಡ್‌ ವಿರುದ್ಧವೂ, ಏಂಜಲಿಕ್‌ ಕೆರ್ಬರ್‌ 6–2, 5–7, 6–4ರಲ್ಲಿ ಜೊಹಾನ್ನ ಲಾರ್ಸನ್‌ ಎದುರೂ, ಪೆಟ್ರಾ ಕ್ವಿಟೋವಾ 7–5, 6–3ರಲ್ಲಿ ವಾಂಗ್‌ ಯಿಫಾನ್‌ ಮೇಲೂ, ನವೊಮಿ ಒಸಾಕ 6–2, 6–0ರಲ್ಲಿ ಜೂಲಿಯಾ ಗ್ಲುಸ್ಕೋ ವಿರುದ್ಧವೂ, ಕಿಕಿ ಬರ್ಟೆನ್ಸ್‌ 6–2, 6–1ರಲ್ಲಿ ಫ್ರಾನ್ಸೆಸ್ಕಾ ಡಿ ಲೊರೆಂಜೊ ಮೇಲೂ, ಲೆಸಿಯಾ ಸುರೆಂಕೊ 6–4, 6–2ರಲ್ಲಿ ಕ್ಯಾರೋಲಿನಾ ವೋಜ್ನಿಯಾಕಿ ವಿರುದ್ಧವೂ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !