ಸೋಮವಾರ, ಸೆಪ್ಟೆಂಬರ್ 16, 2019
26 °C
ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿ

ಟೆನಿಸ್‌: ಸೆಮಿಯಲ್ಲಿ ಎಡವಿದ ಅಂಕಿತಾ

Published:
Updated:
Prajavani

ನವದೆಹಲಿ (ಪಿಟಿಐ): ಚೀನಾದ ಲುವಾನ್‌ನಲ್ಲಿ ನಡೆದ ಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯಲ್ಲಿ ಅಂಕಿತಾ ರೈನಾ ಸವಾಲು ಅಂತ್ಯಗೊಂಡಿದೆ. ಎರಡನೇ ಶ್ರೇಯಾಂಕದ ಭಾರತದ ಆಟಗಾರ್ತಿ ಚೀನಾದ ಯಿಂಗ್‌–ಯಿಂಗ್‌ ಡುವಾನ್‌ ಎದುರು ಸೆಮಿಫೈನಲ್‌ ಹಣಾಹಣಿಯಲ್ಲಿ 3–6, 6–1, 2–6 ಸೆಟ್‌ಗಳ ಅಂತರದಿಂದ ಮಣಿದರು.

ಅಂಕಿತಾ ಈ ಋತುವಿನಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ಎರಡು ಟೂರ್ನಿಗಳಲ್ಲಿ ಫೈನಲ್‌ ತಲುಪಿದ್ದ ಅವರು, ಸಿಂಗಪುರ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಇಸ್ತಾನ್‌ಬುಲ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಆಗಿ ಹೊರಹೊಮ್ಮಿದ್ದರು.

ಅಂಕಿತಾ ಸದ್ಯ ವಿಶ್ವ ಕ್ರಮಾಂಕದಲ್ಲಿ 175ನೇ ಸ್ಥಾನದಲ್ಲಿದ್ದಾರೆ.

Post Comments (+)