ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಮೀರ್‌ ಸವಾಲು ಮೀರಿದ ಆರ್ಯನ್‌

Last Updated 29 ಸೆಪ್ಟೆಂಬರ್ 2021, 14:03 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಯನ್ ದಕ್ಷಿಶ್‌ ಅವರು ಅಗ್ರಶ್ರೇಯಾಂಕದ ಮೀರ್ ಫಜಲ್ ಅಲಿ ಅವರಿಗೆ ಸೋಲುಣಿಸುವ ಮೂಲಕ ಎಐಟಿಎ 12 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ತಲುಪಿದ್ದಾರೆ.

ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಆರ್ಯನ್‌ 6-1, 6-1ರಿಂದ ಮೀರ್‌ ಅವರನ್ನು ಮಣಿಸಿದರು. ಮುಂದಿನ ಪಂದ್ಯದಲ್ಲಿ ಅವರು ಲಿಖಿತ್ ಗೌಡ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಎಂಟರಘಟ್ಟದ ಮತ್ತೊಂದು ಪಂದ್ಯದಲ್ಲಿ ಲಿಖಿತ್‌ 7-6 (5), 6-2ರಿಂದ ಅರ್ಜುನ್ ಸೂರಿ ಅವರನ್ನು ಮಣಿಸಿದರು.

ಬಾಲಕರ ವಿಭಾಗದ ಇನ್ನುಳಿದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಯಶಸ್‌ ರಾಜ್‌ 7-5, 6-3ರಿಂದ ತನಿಶ್ ವೇಪನಪಳ್ಳಿ ಎದುರು, ಋತ್ವಿಕ್ ಜಯಂತ್‌ 6-2, 6-2ರಿಂದ ಪ್ರಕಾಶ್ ಸರನ್ ಅವರನ್ನು ಸೋಲಿಸಿದರು.

ಬಾಲಕಿಯರ ವಿಭಾಗದ ಎಂಟರಘಟ್ಟದ ಹಣಾಹಣಿಗಳಲ್ಲಿ ರಿತಿಶಾ ಚೌಧರಿ 6-1, 6-0ರಿಂದ ಸನ್ಮಿತಾ ಹರಿಣಿ ಎದುರು, ಶ್ರಾವ್ಯಾ ನಂಬೂರಿ 6-4, 6-1ರಿಂದ ಜೀವಿಕಾ ಚನ್ನಭೈರೇಗೌಡ ವಿರುದ್ಧ, ಪೂಜಾ ನಾಗರಾಜ್‌ 6-1, 6-1ರಿಂದ ಯಶಿತಾ ಎರೆಟಿ ಎದುರು ಮತ್ತು ಸೃಷ್ಟಿ ಕಿರಣ್‌ 6-0, 6-0ರಿಂದ ಅಹಿತಾ ಸಿಂಗ್ ಎದುರು ಜಯಿಸಿ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT