ಸೋಮವಾರ, ಫೆಬ್ರವರಿ 24, 2020
19 °C

ಸಿಂಗಲ್ಸ್‌ನಲ್ಲಿ ಸಿಗಲಿಲ್ಲ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುರುಷರ ಸಿಂಗಲ್ಸ್‌ನಲ್ಲಿ ಗುರುವಾರ ಭಾರತಕ್ಕೆ ನಿರಾಸೆ ಕಾಡಿತು.

ಹಾಲಿ ಚಾಂಪಿಯನ್‌ ಪ್ರಜ್ಞೇಶ್‌ ಗುಣೇಶ್ವರನ್‌, ರನ್ನರ್‌ ಅಪ್‌ ಸಾಕೇತ್‌ ಮೈನೇನಿ, ಚೊಚ್ಚಲ ಟೂರ್ನಿಯಲ್ಲಿ (2017) ಪ್ರಶಸ್ತಿ ಜಯಿಸಿದ್ದ ಸುಮಿತ್‌ ನಗಾಲ್‌, ರಾಮಕುಮಾರ್‌ ರಾಮನಾಥನ್‌ ಮತ್ತು ಯುವ ಆಟಗಾರ ನಿಕಿ ಪೂಣಚ್ಚ ಅವರು ಬೆಂಗಳೂರು ಓಪನ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು.

ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಹೊಂದಿದ್ದ ಪ್ರಜ್ಞೇಶ್‌ 6–7, 0–6ರಿಂದ ಫ್ರಾನ್ಸ್‌ನ ಬೆಂಜಮಿನ್‌ ಬೊಂಜಿ ವಿರುದ್ಧ ಆಘಾತ ಕಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 124ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌, ಹಲವು ತಪ್ಪುಗಳನ್ನು ಮಾಡಿ ಮೊದಲ ಸೆಟ್‌ ಕೈಚೆಲ್ಲಿದರು. ಎರಡನೇ ಸೆಟ್‌ನಲ್ಲೂ ಅವರು ಮಂಕಾದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 368ನೇ ಸ್ಥಾನದಲ್ಲಿರುವ ಬೊಂಜಿ, ಮೂರು ಬಾರಿ ಭಾರತದ ಆಟಗಾರನ ಸರ್ವ್‌ ಮುರಿದು ಏಕಪಕ್ಷೀಯವಾಗಿ ಸೆಟ್‌ ಜಯಿಸಿದರು.

ಸುಮಿತ್‌ ನಗಾಲ್‌ 3–6, 3–6ರಲ್ಲಿ ಬ್ಲಾಜ್‌ ರೋಲಾ ಎದುರೂ, ನಿಕಿ ಪೂಣಚ್ಚ 5–7, 3–6ರಲ್ಲಿ ಜಪಾನ್‌ನ ಯುಯಿಚಿ ಸುಗಿಟಾ ವಿರುದ್ಧವೂ, ಸಾಕೇತ್‌ 4–6, 7–5, 2–6ರಲ್ಲಿ ಥಾಮಸ್‌ ಫಾಬಿಯಾನೊ ಮೇಲೂ, ರಾಮಕುಮಾರ್‌ 6–7, 1–6ರಲ್ಲಿ ಇಲ್ಯಾ ಇವಾಷ್ಕಾ ವಿರುದ್ಧವೂ, ಸಿದ್ಧಾರ್ಥ್‌ ರಾವತ್‌ 5–7, 4–6ರಲ್ಲಿ ಜೂಲಿಯನ್‌ ಒಸ್ಲೆಪ್ಪೊ ಎದುರೂ ಸೋತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು