ಶನಿವಾರ, ಸೆಪ್ಟೆಂಬರ್ 18, 2021
30 °C

ರ‍್ಯಾಂಕಿಂಗ್‌: ಜೊಕೊವಿಚ್‌ ಅಗ್ರಸ್ಥಾನಕ್ಕಿಲ್ಲ ಭಂಗ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಸೋಮವಾರ ಬಿಡುಗಡೆಯಾದ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮ್ಯೂನಿಚ್‌ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಜ್ವೆರೆವ್‌ ಸೋತಿದ್ದರು.‌

ದಾಖಲೆಯ 20 ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗಳಿಸಿರುವ ಫೆಡರರ್, ಮೂರು ವರ್ಷಗಳ ಬಳಿಕ ಆವೆಮಣ್ಣಿನ ಅಂಗಣಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ವಾರಾಂತ್ಯದಲ್ಲಿ ನಡೆಯಲಿರುವ ಮ್ಯಾಡ್ರಿಡ್ ಓಪನ್‌ನಲ್ಲ ಅವರು ಆಡಲಿದ್ದಾರೆ. ಗ್ರೀಸ್‌ನ ಸ್ಟೆಫಾನೊಸ್‌ ತಿತಿಪಸ್‌ ಒಂಬತ್ತನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಈ ವರೆಗೆ ಅಮೆರಿಕದ ಜಾನ್‌ ಇಸ್ನೇರ್‌ ಈ ಸ್ಥಾನದಲ್ಲಿದ್ದರು.

ಸರ್ಬಿಯಾದ ನೊವಾಕ್‌ ಜೊಕೊವಿಚ್ ದಾಖಲೆಯ 250 ವಾರ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು ರಫೆಲ್‌ ನಡಾಲ್ ಎರಡನೇ ಸ್ಥಾನದಲ್ಲಿದ್ದಾರೆ.

ರ‍್ಯಾಂಕಿಂಗ್‌ನ ಅಗ್ರ ಐದು ಸ್ಥಾನದಲ್ಲಿರುವವರು

ಸ್ಥಾನ       ಆಟಗಾರ                    ದೇಶ

1       ನೊವಾಕ್‌ ಜೊಕೊವಿಚ್    ಸರ್ಬಿಯಾ 

2       ರಫೆಲ್‌ ನಡಾಲ್‌             ಸ್ಪೇನ್

3       ರೋಜರ್‌ ಫೆಡರರ್         ಸ್ವಿಟ್ಜರ್ಲೆಂಡ್‌

4       ಅಲೆಕ್ಸಾಂಡರ್‌ ಜ್ವೆರೆವ್     ಜರ್ಮನಿ

5       ಡೊಮಿನಿಕ್ ಥೀಮ್         ಆಸ್ಟ್ರಿಯಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು