ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್‌ನಲ್ಲಿ ದಾಖಲೆಯ ಏಳನೇ ಪ್ರಶಸ್ತಿ ಜಯದ ಮೇಲೆ ಕಣ್ಣಿಟ್ಟಿರುವ ನೊವಾಕ್ ಜೊಕೊವಿಚ್ ಈ ಹಾದಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

ಗ್ರ್ಯಾನ್‌ಸ್ಲಾಮ್‌ನಲ್ಲಿ 24ನೇ ಟ್ರೋಫಿ ಗೆದ್ದು ಮಾರ್ಗರೇಟ್ ಕೋರ್ಟ್ ಹೆಸರಿನಲ್ಲಿರುವ ದಾಖಲೆ ಸರಿಗಟ್ಟುವ ಕನಸಿನಲ್ಲಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಕೂಡಾ ಶುಭಾರಂಭ ಮಾಡಿದ್ದಾರೆ.

ರಾಡ್ ಲೆವರ್ ಅರೆನಾದಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಸರ್ಬಿಯಾದ ಜೊಕೊವಿಚ್ 6–3, 6–2, 6–2 ನೇರ ಸೆಟ್‌ಗಳಿಂದ ಅಮೆರಿಕದ ಮಿಷೆಲ್ ಕ್ರೂಯೆಗರ್ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಸತತ 13ನೇ ಸಲ ಎರಡನೇ ಸುತ್ತು ಪ್ರವೇಶಿಸಿದ ಹಿರಿಮೆಗೆ ಭಾಜನರಾದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ 300ನೇ ಪಂದ್ಯ ಆಡಿದ ಜೊಕೊವಿಚ್ ಮೊದಲ ಸೆಟ್‌ನಲ್ಲೇ ಹಿನ್ನಡೆ ಕಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 230ನೇ ಸ್ಥಾನದಲ್ಲಿರುವ ಮಿಷೆಲ್ ಮೂರನೇ ಗೇಮ್‌ನಲ್ಲಿ ಸರ್ಬಿಯಾದ ಆಟಗಾರನ ಸರ್ವ್ ಮುರಿದು 2–1 ಮುನ್ನಡೆ ಗಳಿಸಿದರು.

ಇದರಿಂದ ಕಿಂಚಿತ್ತೂ ವಿಶ್ವಾಸ ಕಳೆದುಕೊಳ್ಳದ ನೊವಾಕ್ ನಂತರ ಮೋಡಿ ಮಾಡಿದರು. ಶರವೇಗದ ಸರ್ವ್ ಮತ್ತು ಬಲಿಷ್ಠ ಹಿಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಜೊಕೊವಿಚ್, ನಂತರದ ಎರಡು ಸೆಟ್‌ಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಜೋ ವಿಲ್ಫ್ರೆಡ್ ಸೊಂಗಾ 6–4, 6–4, 7–6ರಲ್ಲಿ ಮಾರ್ಟಿನ್ ಕ್ಲಿಜಾನ್ ಎದುರೂ, ಡೆನಿಸ್ ಶಪೊವಲೊವ್ 6–2, 6–3, 7–6ರಲ್ಲಿ ಪ್ಯಾಬ್ಲೊ ಆ್ಯಂಡುಜರ್ ಮೇಲೂ, ಡೇವಿಡ್ ಗೊಫಿನ್ 6–0, 6–2, 6–2ರಲ್ಲಿ ಕ್ರಿಸ್ಟಿಯನ್ ಗಾರಿನ್ ವಿರುದ್ಧವೂ, ರ‍್ಯಾನ್ ಹ್ಯಾರಿಸನ್ 6–0, 7–5, 6–3ರಲ್ಲಿ ಜಿರಿ ವೆಸ್ಲಿ ಮೇಲೂ, ಡೇನಿಯಲ್ ಮೆಡ್ವೆದೇವ್ 6–1, 6–2, 6–1ರಲ್ಲಿ ಲಾಯ್ಡ್ ಹ್ಯಾರಿಸ್ ಎದುರೂ, ಜಾವೊ ಸೌಸಾ 7–6, 4–6, 7–6, 4–6, 6–2ರಲ್ಲಿ ಗುಯಿಡೊ ಪೆಲ್ಲಾ ವಿರುದ್ಧವೂ, ಇವೊ ಕಾರ್ಲೊವಿಚ್ 6–7, 7–6, 7–6, 7–6ರಲ್ಲಿ ಹಬರ್ಟ್ ಹುರ್ಕಾಜ್ ಮೇಲೂ, ಅಲೆಕ್ಸಾಂಡರ್ ಜ್ವೆರೆವ್ 6–4, 6–1, 6–4ರಲ್ಲಿ ಅಲಜಾಜ್ ಬೆಡೆನ್ ಎದುರೂ, ಗಿಲ್ಲೆಸ್ ಸಿಮನ್ 7–6, 6–4, 6–2ರಲ್ಲಿ ಜೊರ್ನ್ ಫ್ರಾಟಾಂಜೆಲೊ ಮೇಲೂ, ಮಿಲೊಸ್ ರಾವನಿಕ್ 6–4, 7–6, 6–4ರಲ್ಲಿ ನಿಕ್ ಕಿರ್ಗಿಯೊಸ್ ಎದುರೂ ಗೆದ್ದರು.

ಸೆರೆನಾ ಮಿಂಚು: ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲೇ ಸೆರೆನಾ ವಿಲಿಯಮ್ಸ್ ಮಿಂಚಿದರು.

ಟೂರ್ನಿಯಲ್ಲಿ 16ನೇ ಶ್ರೇಯಾಂಕ ಹೊಂದಿರುವ ಸೆರೆನಾ 6–0, 6–2 ನೇರ ಸೆಟ್‌ಗಳಿಂದ ತಟಜಾನ್ ಮರಿಯಾ ಅವರನ್ನು ಸೋಲಿಸಿದರು.

ಜಪಾನ್‌ನ ಆಟಗಾರ್ತಿ, ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ನವೊಮಿ ಒಸಾಕ 6–4, 6–2ರಲ್ಲಿ ಪೋಲೆಂಡ್‌ನ ಮಗ್ದಾ ಲಿನೆಟ್ ವಿರುದ್ಧ ವಿಜಯಿಯಾದರು.

ರುಮೇನಿಯಾದ ಆಟಗಾರ್ತಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ ಹಲೆಪ್ 6–7, 6–4, 6–2ರಲ್ಲಿ ಕಿಯಾ ಕನೆಪಿ ಎದುರು ಗೆದ್ದರು.

ಸೆರೆನಾ ಅವರ ಸಹೋದರಿ ವೀನಸ್ ವಿಲಿಯಮ್ಸ್ 6–7, 7–6, 6–2ರಲ್ಲಿ ಮಿಹೆಲಾ ಬುಜಾನೆಸ್ಕು ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಯೂಜ್ನಿ ಬೌಷಾರ್ಡ್ 6–2, 6–1ರಲ್ಲಿ ಪೆಂಗ್ ಶೂಯಿ ಎದುರೂ, ಅಲೈಜ್ ಕಾರ್ನೆಟ್ 6–2, 6–2ರಲ್ಲಿ ಲಾರಾ ಆ್ಯರುಬರೆನಾ ಮೇಲೂ, ಟೈಮಿ ಬ್ಯಾಕ್‌ಸಿಂಜಿಕಿ 6–3, 6–0ರಲ್ಲಿ ಡೇರಿಯಾ ಕಸತ್ಕಿನಾ ವಿರುದ್ಧವೂ, ಜೊಹಾನ್ನ ಕೊಂಥಾ 7–6, 2–6, 7–6ರಲ್ಲಿ ಅಜಲಾ ಟಾಮಿಲಜಾವೊವಿಚ್ ಮೇಲೂ, ಗಾರ್ಬೈನ್ ಮುಗುರುಜಾ 6–2, 6–3ರಲ್ಲಿ ಜೆಂಗ್ ಸೈಸಯಿ ಎದುರೂ, ಮ್ಯಾಡಿಸನ್ ಬ್ರೆಂಗಲ್ 6–4, 6–0ರಲ್ಲಿ ಮಿಸಾಕಿ ಡೊಯಿ ವಿರುದ್ಧವೂ, ಕ್ಯಾರೋಲಿನಾ ಪ್ಲಿಸ್ಕೋವಾ 6–3, 6–2ರಲ್ಲಿ ಕ್ಯಾರೋಲಿನಾ ಮುಚೋವಾ ಮೇಲೂ, ವಾಂಗ್ ಕ್ವಿಯಾಂಗ್ 6–4, 6–3ರಲ್ಲಿ ಫಿಯೊನಾ ಫೆರೊ ವಿರುದ್ಧವೂ, ಎಲಿಸೆ ಮರ್ಟೆನ್ಸ್ 6–2, 7–5ರಲ್ಲಿ ಅನಾ ಕ್ಯಾರೋಲಿನಾ ಶಿಮಿಡ್ಲೋವಾ ಎದುರೂ, ಮ್ಯಾಡಿಸನ್ ಕೀಸ್ 6–2, 6–2ರಲ್ಲಿ ಡೆಸ್ಟಾನೆ ಅಯಿವಾ ಮೇಲೂ, ಎಲಿನಾ ಸ್ವಿಟೋಲಿನಾ 6–1, 6–2ರಲ್ಲಿ ವಿಕ್ಟೋರಿಜಾ ಗೊಲುಬಿಕ್ ವಿರುದ್ಧವೂ ವಿಜಯಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.