ಭಾನುವಾರ, ಮೇ 29, 2022
31 °C

ರಫೆಲ್‌ ನಡಾಲ್ ಓಟಕ್ಕೆ ಬ್ರೇಕ್ ಹಾಕುವರೇ ಡ್ಯಾನಿಲ್ ಮೆಡ್ವೆಡೆವ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: 21 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ದಾಖಲೆಯ ಬೆನ್ನುಹತ್ತಿರುವ ರಫೆಲ್‌ ನಡಾಲ್ ಎದುರು ಒಂದೇ ಪಂದ್ಯ ಬಾಕಿ ಇದೆ. ಭಾನುವಾರ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಗೆದ್ದರೆ ಅವರು ‘ಬಿಗ್‌ ತ್ರಿ’ ಪೈಕಿ ಇಬ್ಬರಾದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರನ್ನು ಹಿಂದಿಕ್ಕಿ ಟೆನಿಸ್ ಅಂಗಣದ ರಾಜ ಎನಿಸಿಕೊಳ್ಳಲಿದ್ದಾರೆ.

ಎಲ್ಲ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ಸಾಧನೆಗೆ ಪಾತ್ರರಾಗುವುದಕ್ಕೂ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪ್ರಶಸ್ತಿ ಅವರಿಗೆ ಅಗತ್ಯ. ಇದೆಲ್ಲವನ್ನು ಸಾಧಿಸಲು ಅವರು ಡ್ಯಾನಿಲ್ ಮೆಡ್ವೆಡೆವ್ ಅವರ ಸವಾಲು ಮೀರಿ ನಿಲ್ಲಬೇಕು. 21 ಪ್ರಶಸ್ತಿಗಳ ದಾಖಲೆಯ ಕನಸಿನೊಂದಿಗೆ ಕಳೆದ ಬಾರಿ ಅಮೆರಿಕ ಓಪನ್ ಟೂರ್ನಿಯ ಫೈನಲ್‌ನಲ್ಲಿ ಕಣಕ್ಕೆ ಇಳಿದಿದ್ದ ಜೊಕೊವಿಚ್‌ ಅವರ ಆಸೆಗೆ ಮೆಡ್ವೆಡೆವ್ ತಣ್ಣೀರು ಸುರಿದಿದ್ದರು. ಆಸ್ಟ್ರೇಲಿಯನ್ ಓಪನ್‌ನಲ್ಲೂ ಅವರು ಇಂಥದೇ ಫಲಿತಾಂಶವನ್ನು ಪುನರಾವರ್ತನೆ ಮಾಡುವರೇ ಅಥವಾ ರಫೆಲ್ ಗೆದ್ದು ಬೀಗುವರೇ ಎಂಬುದು ಟೆನಿಸ್ ಲೋಕದ ಕುತೂಹಲ.

ದೇಶ

ರಫೆಲ್ ನಡಾಲ್,  ಸ್ಪೇನ್‌

ಡ್ಯಾನಿಲ್ ಮೆಡ್ವೆಡೆವ್,  ರಷ್ಯಾ

ವಯಸ್ಸು

ರಫೆಲ್ ನಡಾಲ್, 35

ಡ್ಯಾನಿಲ್ ಮೆಡ್ವೆಡೆವ್, 25

ರ‍್ಯಾಂಕಿಂಗ್‌

ಡ್ಯಾನಿಲ್ ಮೆಡ್ವೆಡೆವ್, 2 

ರಫೆಲ್ ನಡಾಲ್, 5

ಶ್ರೇಯಾಂಕ

ಡ್ಯಾನಿಲ್ ಮೆಡ್ವೆಡೆವ್, 2 
ರಫೆಲ್ ನಡಾಲ್, 6

ಮುಖಾಮುಖಿ: ಪಂದ್ಯ 4

ರಫೆಲ್ ನಡಾಲ್ ಗೆಲುವು, 3

ಡ್ಯಾನಿಲ್ ಮೆಡ್ವೆಡೆವ್ ಜಯ, 1

ರಫೆಲ್ ನಡಾಲ್: ಒಟ್ಟು ಪ್ರಶಸ್ತಿ 89

ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳು 20 (ಫ್ರೆಂಚ್ ಓಪನ್: 2005, 2006, 2007, 2008, 2010, 2011, 2012, 2013, 2014, 2017, 2018, 2019, 2020); ವಿಂಬಲ್ಡನ್‌ (2008, 2010); ಅಮೆರಿಕ ಓಪನ್ (2010, 2013, 2017, 2019) ಆಸ್ಟ್ರೇಲಿಯನ್ ಓಪನ್ (2009) 

* ರ‍್ಯಾಂಕಿಂಗ್‌ನಲ್ಲಿ ದಾಖಲೆಯ ಸತತ 849 ವಾರ (2005ರಿಂದ 2021) ಅಗ್ರ 10ರಲ್ಲಿದ್ದರು. ಈ ಸಂದರ್ಭದಲ್ಲಿ ಒಟ್ಟಾರೆ 209 ವಾರ ಅಗ್ರ ಸ್ಥಾನದಲ್ಲೂ ಸತತ 160 ವಾರ ಎರಡನೇ ಸ್ಥಾನದಲ್ಲೂ ಇದ್ದರು.

* ಗ್ರ್ಯಾನ್‌ ಸ್ಲಾಂ ಪಂದ್ಯಗಳಲ್ಲಿ ಒಟ್ಟು 297 ಗೆಲುವು ಸಾಧಿಸಿದ್ದಾರೆ. ಸೋತಿರುವುದು ಕೇವಲ 41 ಪಂದ್ಯ; ಆಸ್ಟ್ರೇಲಿಯನ್ ಓಪನ್‌ನ 90 ಪಂದ್ಯಗಳ ಪೈಕಿ 75ರಲ್ಲಿ ಜಯ ಗಳಿಸಿದ್ದಾರೆ. ಇದು ಆರನೇ ಫೈನಲ್‌.

* ಈ ಋತುವಿನಲ್ಲಿ ಈ ವರೆಗೆ ಸತತ 10 ಪಂದ್ಯಗಳಲ್ಲಿ ಸೋಲರಿಯದೇ ಮುನ್ನುಗ್ಗಿದ್ದಾರೆ. 2021ರಲ್ಲಿ ಪಾದದ ಗಾಯ ಮತ್ತು ಕೋವಿಡ್‌ನಿಂದ ಬಳಲಿದ್ದರು.

ಫೈನಲ್ ಹಾದಿ

ಮೊದಲ ಸುತ್ತು: ಅಮೆರಿಕದ ಮಾರ್ಕೋಸ್ ಗಿರಾನ್‌ ಎದುರು 6-1, 6-4, 6-2ರಲ್ಲಿ ಜಯ

ಎರಡನೇ ಸುತ್ತು: ಜರ್ಮನಿಯ ಯಾನಿಕ್ ಹಂಫ್‌ಮ್ಯಾನ್‌ ವಿರುದ್ಧ 6-2, 6-3, 6-4ರಲ್ಲಿ ಜಯ

ಮೂರನೇ ಸುತ್ತು: ರಷ್ಯಾದ ಕರೇನ್ ಖಚನೊವ್‌ ಎದುರು 6-3, 6-2, 3-6, 6-1ರಲ್ಲಿ ಗೆಲುವು

ನಾಲ್ಕನೇ ಸುತ್ತು: ಫ್ರಾನ್ಸ್‌ನ ಅಡ್ರಿಯನ್ ಮನಾರಿನೊ ವಿರುದ್ಧ 7-6 (16/14) 6-2, 6-2ರಲ್ಲಿ ಜಯ

ಕ್ವಾರ್ಟರ್ ಫೈನಲ್‌: ಕೆನಡಾದ ಡೆನಿಸ್ ಶಪೊವಲೊವ್‌ ವಿರುದ್ಧ 6-3, 6-4, 4-6, 3-6, 6-3ರಲ್ಲಿ ಜಯ

ಸೆಮಿಫೈನಲ್: ಇಟಲಿಯ ಮಟಿಯೊ ಬೆರೆಟಿನಿ ಎದುರು 6-3, 6-2, 3-6, 6-3ರಲ್ಲಿ ಗೆಲುವು

ಡ್ಯಾನಿಲ್ ಮೆಡ್ವೆಡೆವ್‌: ಪ್ರಶಸ್ತಿಗಳು 13

ಗ್ರ್ಯಾನ್‌ ಸ್ಲಾಂ 1 (ಅಮೆರಿಕ ಓಪನ್‌: 2021)

ಆಸ್ಟ್ರೇಲಿಯಾ ಓಪನ್‌: ಫೈನಲ್‌ (2021, 2022)

* ಒಟ್ಟಾರೆ ನಾಲ್ಕನೇ ಗ್ರ್ಯಾನ್‌ ಸ್ಲಾಂ ಫೈನಲ್‌; ಆಸ್ಟ್ರೇಲಿಯನ್ ಓಪನ್‌ನಲ್ಲಿ ಸತತ ಎರಡನೇ ಫೈನಲ್

* 2019ರ ಅಮೆರಿಕ ಓಪನ್ ಫೈನಲ್‌ನಲ್ಲಿ ನಡಾಲ್‌ ಎದುರು, 2021ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್ ಎದುರು ಸೋತಿದ್ದರು.

* 2020ರ ಎಟಿಪಿ ಫೈನಲ್ಸ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ ಕ್ರಮವಾಗಿ ಒಂದು, ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದ ಜೊಕೊವಿಚ್‌, ನಡಾಲ್ ಮತ್ತು ಡಾಮಿನಿಕ್ ಥೀಮ್‌ ವಿರುದ್ಧ ಗೆದ್ದು ಟೂರ್ನಿಯ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದರು.   

ಫೈನಲ್ ಹಾದಿ

ಮೊದಲ ಸುತ್ತು: ಸ್ವಿಟ್ಜರ್ಲೆಂಡ್‌ನ ಹೆನ್ರಿ ಲಾಕ್ಸನೆನ್ ಎದುರು 6-1, 6-4, 7-6 (7/3)ರಲ್ಲಿ ಗೆಲುವು

ಎರಡನೇ ಸುತ್ತು: ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ವಿರುದ್ಧ 7-6 (7/1), 6-4, 4-6, 6-2ರಲ್ಲಿ ಜಯ

ಮೂರನೇ ಸುತ್ತು: ನೆದರ್ಲೆಂಡ್ಸ್‌ನ ಬಾಟಿಕ್ ವ್ಯಾನ್‌ ಡಿ ಜಂಡ್‌ಶುಲ್ಪ್‌ ವಿರುದ್ಧ 6-4, 6-4, 6-2ರಲ್ಲಿ ಜಯ

ನಾಲ್ಕನೇ ಸುತ್ತು: ಅಮೆರಿಕದ ಮ್ಯಾಕ್ಸಿಮ್ ಕ್ರೆಸಿ ವಿರುದ್ಧ 6-2, 7-6 (7/4), 6-7 (4/7), 7-5ರಲ್ಲಿ ಜಯ

ಕ್ವಾರ್ಟರ್‌ ಫೈನಲ್‌: ಕೆನಡಾದ ಫೆಲಿಕ್ಸ್ ಆಗರ್ ವಿರುದ್ಧ 6-7 (4/7), 3-6, 7-6 (7/2), 7-5, 6-4ರಲ್ಲಿ ಜಯ

ಸೆಮಿಫೈನಲ್‌: ಗ್ರೀಸ್‌ನ ಸ್ಟೆಫನೋಸ್ ಸಿಟ್ಸಿಪಾಸ್ ಎದುರು 7-6 (7/5), 4-6, 6-4, 6-1ರಲ್ಲಿ ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು