ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್: ಇಟಲಿಯ ಸ್ಟಿಫಾನೊಗೆ ಸಿಂಗಲ್ಸ್ ಕಿರೀಟ

ಬೆಂಗಳೂರು ಓಪನ್ ಟೆನಿಸ್; ದಕ್ಷಿಣ ಕೊರಿಯಾ ಆಟಗಾರನಿಗೆ ನಿರಾಸೆ
Published 18 ಫೆಬ್ರುವರಿ 2024, 20:40 IST
Last Updated 18 ಫೆಬ್ರುವರಿ 2024, 20:40 IST
ಅಕ್ಷರ ಗಾತ್ರ

ಬೆಂಗಳೂರು: ಛಲದ ಆಟವಾಡಿದ ಇಟಲಿಯ ಸ್ಟಿಫಾನೊ ನೆಪೊಲಿಟಾನೊ ಭಾನುವಾರ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಕರ್ನಾಟಕ ರಾಜ್ಯ  ಲಾನ್‌ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆದ ಫೈನಲ್‌ನಲ್ಲಿ ಸ್ಟಿಫಾನೊ 4-6, 6-3, 6-3ರಿಂದ ದಕ್ಷಿಣ ಕೊರಿಯಾದ ಸಿಯಾಂಗ್‌ಚಾನ್ ಹಾಂಗ್ ವಿರುದ್ಧ ಜಯಿಸಿದರು.

ವಾರಾಂತ್ಯದ ರಜೆ ದಿನ ಟೆನಿಸ್ ಕಣ್ತುಂಬಿಕೊಳ್ಳಲು ಸೇರಿದ್ದ ಪ್ರೇಕ್ಷಕರನ್ನು ಇಬ್ಬರೂ ಆಟಗಾರರು ನಿರಾಸೆಗೊಳಿಸಲಿಲ್ಲ. ಮೊದಲ ಸೆಟ್‌ನ್‌ನಲ್ಲಿ ಇಬ್ಬರ ಹೋರಾಟವೂ ರೋಚಕವಾಗಿತ್ತು.  ಉತ್ತಮ ಸರ್ವ್ ಮತ್ತು ಕ್ರಾಸ್‌ಕೋರ್ಟ್ ರಿಟರ್ನ್‌ಗಳನ್ನು ಆಡಿದ ಸಿಯಾಂಗ್ ಚಾನ್ 6–4ರಿಂದ ಈ ಸೆಟ್‌ನಲ್ಲಿ ಗೆದ್ದರು. ಆದರೆ ಇಟಲಿಯ ಆಟಗಾರ ಚುರುಕಾದ ಆಟ ತೋರಿದರು. ಉತ್ತಮವಾದ ಬ್ಯಾಕ್‌ಹ್ಯಾಂಡ್ ಮತ್ತು ಶರವೇಗದ ರಿಟರ್ನ್‌ಗಳನ್ನು ಆಡಿದ ಅವರು ಹಾಂಗ್‌ಗೆ ತಿರುಗೇಟು ನೀಡಿದರು.  ನಂತರದ ಎರಡೂ ಸೆಟ್‌ಗಳಲ್ಲಿ ಪಾರಮ್ಯ ಮೆರೆದರು.

2 ಗಂಟೆ, 23 ನಿಮಿಷಗಳಲ್ಲಿ ಮುಗಿದ ಪಂದ್ಯದಲ್ಲಿ ಸ್ಟಿಫಾನೊ ₹ 15 ಲಕ್ಷ ನಗದು ಪ್ರಶಸ್ತಿ ಗಳಿಸಿದರು. ಜೊತೆಗೆ ಅವರಿಗೆ 100 ರ‍್ಯಾಂಕಿಂಗ್ ಪಾಯಿಂಟ್ಸ್‌ ಕೂಡ ಅವರ ಖಾತೆ ತೆರೆದವು.

ಡಬಲ್ಸ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಥಳೀಯ ಆಟಗಾರ ರೋಹನ್ ಬೋಪಣ್ಣ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT