ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಚ್‌ ಟೆನಿಸ್‌ ಚಾಂಪಿಯನ್‌ಷಿಪ್ಸ್‌: ಬೋಪಣ್ಣ–ಎಬ್ಡೆನ್‌ ಜೋಡಿಗೆ ಸೋಲು

Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

ಲಂಡನ್‌: ಅಗ್ರ ಶ್ರೇಯಾಂಕದ ರೋಹನ್ ಬೋಪಣ್ಣ– ಮ್ಯಾಥ್ಯೂ ಎಬ್ಡೆನ್ ಜೋಡಿ, ಸಿಂಚ್‌ ಟೆನಿಸ್‌ ಚಾಂಪಿಯನ್‌ಷಿಪ್ಸ್‌ನ ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶುಕ್ರವಾರ ರಷ್ಯಾ–ಅಮೆರಿಕನ್ ಜೋಡಿಯಾದ ಕರೆನ್‌ ಕಚನೋವ್‌– ಟೇಲರ್‌ ಫ್ರಿಟ್ಜ್‌ ಅವರಿಗೆ ತೀವ್ರ ಹೋರಾಟದ ನಂತರ 7–6 (1), 7–6 (3) ರಲ್ಲಿ ಮಣಿಯಿತು.

ಭಾರತ– ಆಸ್ಟ್ರೇಲಿಯಾದ ಆಟಗಾರರಾದ ಬೋಪಣ್ಣ–ಎಬ್ಡೆನ್‌  ಎಂಟನೇ ಶ್ರೇಯಾಂಕದ ಎದುರಾಳಿಗಳಿಗೆ ಸೋತರು. ಸರ್ವ್‌ಗಳಲ್ಲಿ ಕಚನೋವ್‌, ಫ್ರಿಟ್ಜ್‌ ಜೋಡಿ ಅಗ್ರ ಶ್ರೇಯಾಂಕದ ಸ್ಪರ್ಧಿಗಳಿಗಿಂತ ಉತ್ತಮ ಸಾಧನೆ ತೋರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT