ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢವಾಗಿ ಕಾಣೆಯಾಗಿದ್ದ ಚೀನಾದ ಟೆನಿಸ್‌ ತಾರೆ ಫೆಂಗ್‌ ಶುಯಿ ದಿಢೀರ್‌ ಪ್ರತ್ಯಕ್ಷ

Last Updated 21 ನವೆಂಬರ್ 2021, 6:42 IST
ಅಕ್ಷರ ಗಾತ್ರ

ಬೀಜಿಂಗ್‌: ನಿಗೂಢವಾಗಿ ಕಾಣೆಯಾಗಿದ್ದ ಚೀನಾದ ಟೆನಿಸ್ ತಾರೆ ಫೆಂಗ್‌ ಶುಯಿ ಅವರು ಭಾನುವಾರ ಬೀಜಿಂಗ್ ಟೆನಿಸ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿರುವುದು ಅಧಿಕೃತ ಈವೆಂಟ್‌ನ ಫೋಟೊ, ವಿಡಿಯೊಗಳಿಂದ ಗೊತ್ತಾಗಿದೆ.

ಕಾಣೆಯಾಗಿದ್ದ ಫೆಂಗ್‌ ಶುಯಿ ಅವರ ಯೋಗಕ್ಷೇಮದ ಕುರಿತ ಮಾಹಿತಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ಮಧ್ಯೆ ಅವರು ಪ್ರತ್ಯಕ್ಷರಾಗಿದ್ದಾರೆ.

ಫಿಲಾ ಕಿಡ್ಸ್ ಜೂನಿಯರ್ ಟೆನಿಸ್ ಚಾಲೆಂಜರ್ ಫೈನಲ್‌ಗೆ ಅವರು ಹಾಜರಾಗಿರುವ ಫೋಟೊವನ್ನು ಚೀನಾ ಓಪನ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕಮ್ಯುನಿಸ್ಟ್‌ ಪಕ್ಷದ ಪ್ರಭಾವಿ ನಾಯಕ ಝಾಂಗ್ ಗವೊಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೆಂದು ಪೆಂಗ್ ಎರಡು ವಾರಗಳ ಹಿಂದೆ ಆರೋಪಿಸಿದ್ದರು. ಆದರೆ, ಅವರ ಆರೋಪಗಳನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಸೆನ್ಸಾರ್‌ ಮಾಡಲಾಗಿತ್ತು.

ಹಲವು ವರ್ಷಗಳ ತಮ್ಮ ಸಂಬಂಧದಲ್ಲಿ 70 ವರ್ಷದ ಝಾಂಗ್ ಗವೊಲಿ ಅವರು ಲೈಂಗಿಕತೆಗೆ ಒತ್ತಾಯಿಸಿದ್ದಾರೆ ಎಂದು ಎರಡು ಬಾರಿಯ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ವಿಜೇತೆ ಫೆಂಗ್‌ ಆರೋಪಿಸಿದ್ದರು. ಈ ಆರೋಪದ ನಂತರ ಅವರು ನಿಗೂಢವಾಗಿ ಕಣ್ಮರೆಯಾಗಿದ್ದರು.

ಈ ವಿಚಾರ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದೂ ಅಲ್ಲದೇ, ಅವರ ಯೋಗ ಕ್ಷೇಮದ ಆತಂಕ ವ್ಯಕ್ತವಾಗಿತ್ತು. ಫೆಂಗ್‌ ಶುಯಿ ವಿಚಾರದಲ್ಲಿ ಚೀನಾದ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ಮಧ್ಯೆ, ಚೀನಾದ ಸರ್ಕಾರಿ ಒಡೆತನದ ಸುದ್ದಿ ಮಾಧ್ಯಮಗಳು ಫೆಂಗ್‌ ಶುಯಿ ಅವರ ವಿಡಿಯೊಗಳನ್ನು ಪ್ರಸಾರ ಮಾಡಿವೆ. ಅವರು ಕ್ಷೇಮವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಈ ವಿಡಿಯೊ, ಫೋಟೊಗಳನ್ನು ಸುದ್ದಿ ಸಂಸ್ಥೆ ಎಎಫ್‌ಪಿ ಖಚಿತಪಡಿಸಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT