ಬುಧವಾರ, ಅಕ್ಟೋಬರ್ 23, 2019
21 °C
ಸೆ. 14, 15ರಂದು ನಡೆಯಬೇಕಿದ್ದ ಪಂದ್ಯ ನವೆಂಬರ್‌ಗೆ

ಪಾಕ್‌ ವಿರುದ್ಧ ಡೇವಿಸ್‌ ಕಪ್‌ ಪಂದ್ಯ ಮುಂದಕ್ಕೆ

Published:
Updated:

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಇಸ್ಲಾಮಾಬಾದ್‌ನಲ್ಲಿ ಸೆಪ್ಟೆಂಬರ್‌ 14 ಮತ್ತು 15ರಂದು ನಡೆಯಬೇಕಾಗಿದ್ದ ಡೇವಿಸ್‌ ಕಪ್‌ ಪಂದ್ಯವನ್ನು  ನವೆಂಬರ್‌ಗೆ ಮುಂದೂಡಲಾಗಿದೆ. ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌), ಭದ್ರತಾ ವ್ಯವಸ್ಥೆ ಪರಾಮರ್ಶೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದೆ.

‘ವಿಶೇಷ ಸಂದರ್ಭ’ವೆಂದು ಪರಿಗಣಿಸಿ ಏಷ್ಯಾ–ಒಷಾನಿಯಾ ವಲಯದ ಒಂದನೇ ಗುಂಪಿನ ಈ ಪಂದ್ಯವನ್ನು ಮುಂದೂಡಲಾಗಿದೆ ಎಂದು ಐಟಿಎಫ್‌ ಹೇಳಿಕೆಯೊಂದರಲ್ಲಿ ತಿಳಿಸಿದೆ. ಪಂದ್ಯದ ಪರಿಷ್ಕೃತ ದಿನಾಂಕವನ್ನು ಸೆ.9ಕ್ಕೆ ಮೊದಲು ನಿಗದಿಪಡಿಸಲಾಗುವುದು.

‘ಇದೊಂದು ಅಸಾಧಾರಣ ಸಂದರ್ಭ. ಆಟಗಾರರ, ಅಧಿಕಾರಿಗಳ ಮತ್ತು ಪ್ರೇಕ್ಷಕರ ಸುರಕ್ಷೆ ಐಟಿಎಫ್‌ನ ಮೊದಲ ಆದ್ಯತೆ’ ಎಂದು ಹೇಳಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)