ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದ ಪ್ರಕಾಶ್‌ ರನ್ನರ್‌ ಅಪ್

Published 14 ಅಕ್ಟೋಬರ್ 2023, 20:53 IST
Last Updated 14 ಅಕ್ಟೋಬರ್ 2023, 20:53 IST
ಅಕ್ಷರ ಗಾತ್ರ

ನವದೆಹಲಿ: ಅಗ್ರ ಶ್ರೇಯಾಂಕದ ಆಟಗಾರ ಹೃತಿಕ್ ಕಟಕಮ್ (ತೆಲಂಗಾಣ) ಅವರು 28ನೇ ಫೆನೆಸ್ತಾ ಓಪನ್ ರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಷಿಪ್‌ನ 14 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌  ಫೈನಲ್‌ನಲ್ಲಿ ಶನಿವಾರ ಕರ್ನಾಟಕದ ಪ್ರಕಾಶ್ ಸರನ್ ಅವರನ್ನು 6–4, 6–3 ರಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು.

16 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ವಿಭಾಗದ ಅನಿರೀಕ್ಷಿತ ಫಲಿತಾಂಶದಲ್ಲಿ, 16ನೇ ಶ್ರೇಯಾಂಕದ ಶಂಕರ್ ಹೀಸ್ನಮ್ 6–1, 6–2 ರಿಂದ ಏಳನೇ ಶ್ರೇಯಾಂಕದ ವಿ.ತಿರುಮುರುಗನ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ರಿಶಿತಾ ಬಸಿರೆಡ್ಡಿ 6–4, 6–3 ರಿಂದ ದೆಹಲಿಯ ಐಶಿ ಬಿಷ್ಟ್ ಅವರನ್ನು ಸೋಲಿಸಿದರು.

ಮಹಾರಾಷ್ಟ್ರದ ಪ್ರಿಶಾ ಶಿಂದೆ 6–1, 6–2 ರಿಂದ ಆರನೇ ಶ್ರೇಯಾಂಕದ ಆನಂದಿತಾ ಉಪಾಧ್ಯಾಯ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT