ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌: ಮಾರ್ಟಿಚ್‌ಗೆ ಆಘಾತ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಭಾರೀ ಮಳೆಯಿಂದ ಪಂದ್ಯಗಳ ಆರಂಭದಲ್ಲಿ ವ್ಯತ್ಯಯ
Last Updated 5 ಜೂನ್ 2019, 18:58 IST
ಅಕ್ಷರ ಗಾತ್ರ

ಪ್ಯಾರಿಸ್‌ (ಪಿಟಿಐ): ಭಾರೀ ಮಳೆಯಿಂದಾಗಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಬುಧವಾರದ ಪಂದ್ಯಗಳು ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ.

ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ನೊವಾಕ್‌ ಜೊಕೊವಿಚ್‌ ಅವರು ಇಲ್ಲಿನ ಫಿಲಿಪ್‌ ಚಾಟ್ರಿಯರ್‌ ಅಂಗಣದಲ್ಲಿ ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು ಎದುರಿಸಬೇಕಿತ್ತು. ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಸಿಮೊನಾ ಹಲೆಪ್‌ ಅವರು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅಮಂಡಾ ಅನಿಸಿಮೊವಾ ಅವರಿಗೆ ಮುಖಾಮುಖಿಯಾಗಲಿದ್ದರು.

ಸುಸಾನ್‌ ಲೆಂಗ್‌ಲೆನ್‌ ಅಂಗಣದಲ್ಲಿ ಅಮೆರಿಕಾದ ಮ್ಯಾಡಿಸನ್‌ ಕೀಸ್‌ ಅವರು ಆ್ಯಶ್ಲೆ ಬಾರ್ಟಿ ವಿರುದ್ಧ ಹೋರಾಟ ನಡೆಸಬೇಕಿತ್ತು.

ಮಂಗಳವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಜೆಕ್‌ ಗಣರಾಜ್ಯದ ಮರ್ಕೆಟಾವೊಂಡ್ರೊಸೊವಾ ಅವರು ಸೆಮಿಫೈನಲ್‌ ಪ್ರವೇಶಿಸಿದರು. ಕ್ರೊವೇಷ್ಯಾದ ಪೆಟ್ರಾ ಮಾರ್ಟಿಕ್‌ ಅವರನ್ನು 7–6 (1), 7–5 ಸೆಟ್‌ಗಳಿಂದವೊಂಡ್ರೊಸೊವಾ ಸದೆಬಡಿದರು.

ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್‌ ಆಟಗಾರ ರಫೆಲ್‌ ನಡಾಲ್‌ ಅವರು ಜಪಾನ್‌ ದೇಶದ ಕಿ ನಿಶಿಕೋರಿ ಸವಾಲನ್ನು ಮೆಟ್ಟಿನಿಂತು ಸೆಮಿಫೈನಲ್‌ಗೆ ಪ್ರವೇಶಿಸಿದ್ದರು.

6–1, 6–1, 6–3 ಸೆಟ್‌ಗಳಿಂದ ಜಯದ ನಗೆ ಬೀರಿದರು. ಆ ಮೂಲಕ ನಡಾಲ್‌, ಇಲ್ಲಿನ ಕ್ಲೇ ಕೋರ್ಟ್‌ ಅಂಗಣದಲ್ಲಿ ಗೆಲುವು ಸೋಲಿನ ದಾಖಲೆಯನ್ನು 91–2ಕ್ಕೆ ಹೆಚ್ಚಿಸಿಕೊಂಡರು.

ಪುರುಷರ ಸಿಂಗಲ್ಸ್ ಮತ್ತೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಟೆನಿಸ್‌ ದಂತಕತೆ ಸ್ವಿಟ್ಜರ್‌ಲೆಂಡ್‌ ರೋಜರ್‌ ಫೆಡರರ್‌ ಅವರು ಸ್ಟ್ಯಾನ್‌ ವಾವ್ರಿಂಕಾ ಅವರಿಗೆ ಸೋಲಿನ ರುಚಿ ತೋರಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದರು.

37 ವರ್ಷದ ಫೆಡರರ್‌, 7–6 (7/4), 4–6, 7–6 (7/5), 6–4 ಸೆಟ್‌ಗಳಿಂದ ಜಯದ ತೋರಣ ಕಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT