ಶನಿವಾರ, ಡಿಸೆಂಬರ್ 4, 2021
26 °C
ಇಂಡಿಯನ್‌ ವೆಲ್ಸ್ ಟೆನಿಸ್ ಟೂರ್ನಿ

ಇಂಡಿಯನ್‌ ವೆಲ್ಸ್: ಜಾನ್‌–ಫಿಲಿಪ್‌ಗೆ ಡಬಲ್ಸ್ ಗರಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಇಂಡಿಯನ್‌ ವೆಲ್ಸ್: ಆಸ್ಟ್ರೇಲಿಯಾದ ಜಾನ್ ಪೀಯರ್ಸ್‌ ಹಾಗೂ ಸ್ಲೊವೇಕಿಯಾದ ಫಿಲಿಪ್ ಪೊಲಾಸೆಕ್ ಅವರು ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಈ ಆಟಗಾರರು 6-3 7-6(1)ರಿಂದ ರಷ್ಯಾದ ಅಸ್ಲನ್ ಕರಾತ್ಸೆವ್ ಮತ್ತು ಆ್ಯಂಡಿ ರುಬ್ಲೆವ್ ಅವರನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಆಸ್ಟ್ರೇಲಿಯಾ –ಸ್ಲೊವೇಕಿಯಾ ಜೋಡಿಯು ಎರಡನೇ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಎದುರಿಸಿದರು.

ಮಹಿಳಾ ಡಬಲ್ಸ್‌ ಪ್ರಶಸ್ತಿಯು ತೈವಾನ್‌ನ ಶೇ ಸು ವೇ ಹಾಗೂ ಬೆಲ್ಜಿಯಂನ ಎಲಿಸ್ ಮರ್ಟೆನ್ಸ್ ಅವರ ಪಾಲಾಯಿತು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಈ ಜೋಡಿಯು 7–6 (1), 6–3ರಿಂದ ರಷ್ಯಾದ ಕುದರ್ಮೊತೆವಾ ಮತ್ತು ಕಜಕಸ್ತಾನದ ಎಲೆನಾ ರಿಬಾಕಿನಾ ಅವರನ್ನು ಸೋಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು