ಭಾನುವಾರ, ಜುಲೈ 3, 2022
24 °C

ಟಿಟಿ: ಕರ್ನಾಟಕಕ್ಕೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಆಟಗಾರ್ತಿಯರು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಸಬ್‌ ಜೂನಿಯರ್ ಮತ್ತು ಕೆಡೆಟ್ ವಿಭಾಗದ ಪಂದ್ಯಗಳಲ್ಲಿ ಸೋಲುಂಡರು.

ದೇಶ್ನಾ ವಂಶಿಕಾ ಕ್ವಾರ್ಟರ್‌ ಫೈನಲ್‌ನಲ್ಲಿ 9-11, 6-11, 8-11, 4-11ರಲ್ಲಿ ಮಹಾರಾಷ್ಟ್ರದ ಪೃಥಾ ವರ್ಟಿಕರ್ ವಿರುದ್ಧ ಸೋತರು. ತೃಪ್ತಿ ಪುರೋಹಿತ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಮಹಾರಾಷ್ಟ್ರದ ಅನನ್ಯ ಚಂದೆ ಅವರಿಗೆ 7-11, 10-12, 6-11ರಲ್ಲಿ ಮಣಿದರು.

ಸಹನಾ ಮೂರ್ತಿ ಮೊದಲ ಸುತ್ತಿನಲ್ಲಿ ಮಹಾರಾಷ್ಟ್ರದ ಜೆನಿಫರ್ ವರ್ಗೀಸ್‌ ವಿರುದ್ಧ 12-10,11-6,11-13,5-11,9-11ರಲ್ಲಿ ಸೋತರು. ನಿಹಾರಿಕಾ ತಮಿಳುನಾಡಿನ ಚಂದ್ರಮೌಳಿ ವಾಣಿಶ್ರೀ ಎದುರು 6-11,10-12,11-4, 15-13, 10-12ರಲ್ಲಿ ಸೋತರು.

ಕೆಡೆಟ್ ವಿಭಾಗದಲ್ಲಿ ಸಾನ್ವಿ ಮಂಡೇಕರ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಪಶ್ಚಿಮ ಬಂಗಾಳದ ಸಂಚಾರಿ ಚಕ್ರವರ್ತಿ ವಿರುದ್ಧ ‌9-11, 6-11, 3-11ರಲ್ಲಿ ಸೋಲುಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು