ಎಐಟಿಎ ಟೆನಿಸ್ ಟೂರ್ನಿ: ಕೌಶಿಕ್, ಅರ್ಜಾನ್ಗೆ ಪ್ರಶಸ್ತಿ

ಬೆಂಗಳೂರು: ಉತ್ತಮ ಆಟವಾಡಿದ ಕೌಶಿಕ್ ರಾಜೇಶ್ ಮತ್ತು ಅರ್ಜಾನ್ ಖೊರಾಕಿವಾಲ ಅವರು ಎಐಟಿಎ ಸಿಎಸ್7 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಮುರುಗನ್ ಟೆನಿಸ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ವಿಭಾಗದಲ್ಲಿ ಕೌಶಿಕ್ 4-6, 6-4, 6-4ರಿಂದ ಶ್ರೀಕರ್ ಧೋನಿ ಸವಾಲು ಮೀರಿದರು.
ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅರ್ಜಾನ್ 6-3, 6-3ರಿಂದ ದಿಶಾ ಕುಮಾರ್ ಅವರನ್ನು ಸೋಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.