ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಗಾಯಗೊಂಡಿರುವ ರಫೆಲ್‌ ನಡಾಲ್ ಅಲಭ್ಯ  

Published 7 ಜನವರಿ 2024, 13:57 IST
Last Updated 7 ಜನವರಿ 2024, 13:57 IST
ಅಕ್ಷರ ಗಾತ್ರ

ಮೆಲ್ಬರ್ನ್ (ಆಸ್ಟ್ರೇಲಿಯಾ): ಸ್ಪೇನ್‌ನ ರಫೆಲ್ ನಡಾಲ್ ಅವರು ಒಂದು ವರ್ಷದ ಬಳಿಕ  ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್ ಟೂರ್ನಿಯ ಮೂಲಕ ಟೆನಿಸ್‌ಗೆ ಪುನರಾಗಮನ ಮಾಡಿದ್ದರು. ಆದರೆ ಅವರು ಈಗ ಮತ್ತೆ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 

ಬ್ರಿಸ್ಬೇನ್‌ ಟೂರ್ನಿಯಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್ ಅವರು ಜೋರ್ಡಾನ್‌ ಥಾಂಪ್ಸನ್‌ ಎದುರು ಸೋತಿದ್ದರು. ಈ ಹಿಂದೆ ಸೊಂಟದ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಡಾಲ್, ಟೂರ್ನಿಯ ಆರಂಭದಲ್ಲಿ ತಮ್ಮಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

‘ಸೊಂಟದ ಸ್ನಾಯುವಿನಲ್ಲಿ ಸಣ್ಣ ಸೀಳು ಬಿಟ್ಟಿರುವುದು ಸ್ಕ್ಯಾನಿಂಗ್‌ ಮಾಡಿಸಿದಾಗ ಗೊತ್ತಾಗಿದೆ. ಚಿಕಿತ್ಸೆಗಾಗಿ ಸ್ಪೇನ್‌ಗೆ ಮರಳುತ್ತಿದ್ದೇನೆ‘ ಎಂದು 22 ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ ನಡಾಲ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

‘ಇದೀಗ, ನಾನು ಗರಿಷ್ಠ ಮಟ್ಟದಲ್ಲಿ ಸ್ಪರ್ಧಿಸಲು ಸಿದ್ಧನಿಲ್ಲ. ಪುನರಾಗಮನಕ್ಕಾಗಿ ತುಂಬಾ ಶ್ರಮಿಸಿದ್ದೇನೆ. ನಾನು ಯಾವಾಗಲೂ ಹೇಳಿದಂತೆ ಮೂರು ತಿಂಗಳಲ್ಲಿ ನನ್ನ ಉತ್ತಮ ಮಟ್ಟದಲ್ಲಿರುವುದು ಗುರಿಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ಮೆಲ್ಬರ್ನ್ ಪ್ರೇಕ್ಷಕರ ಎದುರು ಆಡಲು ಸಾಧ್ಯವಾಗದ ಕಾರಣ ಬೇಸರವಿದೆ. ಇದು ತುಂಬಾ ಕೆಟ್ಟ ಸುದ್ದಿಯಲ್ಲಿ ಮತ್ತು ನಾವೆಲ್ಲರೂ ಸಕಾರಾತ್ಮಕವಾಗಿದ್ದೇವೆ. ನಾನು ಆಸ್ಟ್ರೇಲಿಯಾದಲ್ಲಿ ಆಡಲು ಬಯಸಿದ್ದೆ’ ಎಂದು ತಿಳಿಸಿದ್ದಾರೆ. 

 ಆಸ್ಟ್ರೇಲಿಯ ಓಪನ್‌ ಜನವರಿ 14ರಿಂದ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಆರಂಭವಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT